ಹರ್ಯಾಣ ವಿಧಾನಸಭಾ ಚುನಾವಣೆ | ಜೆಜೆಪಿ ಮತ್ತು ಎಎಸ್ಪಿ(ಕೆ) ಮೈತ್ರಿ

PC : X
ಹೊಸದಿಲ್ಲಿ : ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಗಾಗಿ ತಮ್ಮ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ ಎಂದು ಜನನಾಯಕ ಜನತಾ ಪಾರ್ಟಿ(ಜೆಜೆಪಿ)ಯ ಮುಖ್ಯಸ್ಥ ಹಾಗೂ ಮಾಜಿ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಮತ್ತು ಆಝಾದ್ ಸಮಾಜ ಪಾರ್ಟಿ -ಕಾನ್ಶಿರಾಂ(ಎಎಸ್ಪಿ-ಕೆ) ಮುಖ್ಯಸ್ಥ ಚಂದ್ರಶೇಖರ್ ಆಝಾದ್ ರಾವಣ ಅವರು ಮಂಗಳವಾರ ದಿಲ್ಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ 70ರಲ್ಲಿ ಜೆಜೆಪಿ ಮತ್ತು 20ರಲ್ಲಿ ಎಎಸ್ಪಿ(ಕೆ) ಸ್ಪರ್ಧಿಸಲಿವೆ.
ಹರ್ಯಾಣ ವಿಧಾನಸಭಾ ಚುನಾವಣೆಯು ಅ.1ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಅ.4ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.
Next Story





