Uttarakhand ಹೆಲಿಕಾಪ್ಟರ್ ಪತನ | ಕರ್ನಾಟಕದ ಐವರು ಸೇರಿದಂತೆ 6 ಮಂದಿ ಮೃತ್ಯು: ದೃಢಪಡಿಸಿದ ಅಧಿಕಾರಿಗಳು

Photo Credit : PTI
ಹೊಸದಿಲ್ಲಿ: ಶುಕ್ರವಾರ ಮಧ್ಯಾಹ್ನ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನಗೊಂಡ ನಂತರ ಎಲ್ಲಾ ಐವರು ಪ್ರಯಾಣಿಕರು ಮತ್ತು ಪೈಲಟ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಹೆಲಿಕಾಪ್ಟರ್ ನಾಪತ್ತೆ ಬಳಿಕ ಮಧ್ಯಾಹ್ನ 2.20ರ ಸುಮಾರಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪೈಲಟ್ ಸೇರಿದಂತೆ ಎಲ್ಲಾ ಆರು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ನಲ್ಲಿದ್ದ ಐವರು ಪ್ರಯಾಣಿಕರು ಕರ್ನಾಟಕದವರಾಗಿದ್ದು, ಅವರನ್ನು ಅರುಣ್ ಸಾಳುಂಕೆ, ಎಚ್.ಎಸ್. ನಟರಾಜ್, ಪ್ರತಾಪ್ ನಿಂಗರಾಜನ್, ಸುದೀರ್ ಕೆ. ಮತ್ತು ಶಂಕರಗೌಡ ವಿ.ಬಿ. ಎಂದು ಗುರುತಿಸಲಾಗಿದೆ. ಅರುಣ್ ಅವರು ಬೆಂಗಳೂರಿನ ಕ್ರೈಂ ಬ್ರಾಂಚ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಖಾಸಗಿ ವಿಮಾನಯಾನ ಸಂಸ್ಥೆ ಟ್ರಾನ್ಸ್ ಭಾರತ್ ಏವಿಯೇಷನ್ಗೆ ಸೇರಿದ ಹೆಲಿಕಾಪ್ಟರ್ ಅನ್ನು ಚಲಾಯಿಸುತ್ತಿದ್ದ ಪೈಲಟ್ ಹಿಮಾಂಶು ಸಬರ್ವಾಲ್ ಅವರು ದಿಲ್ಲಿಯ ನಿವಾಸಿ ಎಂದು ತಿಳಿದು ಬಂದಿದೆ.




