ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಮನೆ ಮೇಲೆ ಈಡಿ ದಾಳಿ

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ಈಡಿ) ಮಂಗಳವಾರ ಹೀರೋ ಮೋಟೋಕಾರ್ಪ್ ಕಾರ್ಯನಿರ್ವಾಹಕ ಅಧ್ಯಕ್ಷ ಪವನ್ ಮುಂಜಾಲ್ , ಇತರರ ಮನೆಗಳು ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಪ್ರಕಾರ ದಿಲ್ಲಿ ಹಾಗೂ ನೆರೆಯ ಗುರುಗ್ರಾಮ್ ನಲ್ಲಿರುವ ಕಟ್ಟಡದಲ್ಲಿ ಶೋಧ ನಡೆಸಲಾಗಿದೆ.
ತೆರಿಗೆ ವಂಚನೆ ತನಿಖೆಯ ಭಾಗವಾಗಿ ಕಳೆದ ವರ್ಷ ಮಾರ್ಚ್ ನಲ್ಲಿ ಆದಾಯ ತೆರಿಗೆ ಇಲಾಖೆಯು ಮುಂಜಾಲ್ ಹಾಗೂ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟಾರ್ಕಾರ್ಪ್ ಮೇಲೆ ದಾಳಿ ನಡೆಸಿತ್ತು
Next Story





