ಹಿಂದೂ ರಾಷ್ಟ್ರೀಯವಾದ, ಖಾಲಿಸ್ತಾನಿ ಪ್ರತ್ಯೇಕತಾವಾದವನ್ನು ಸಂಭಾವ್ಯ 9 ಬೆದರಿಕೆಗಳ ಪಟ್ಟಿಯಲ್ಲಿ ಸೇರಿಸಿದ ಇಂಗ್ಲೆಂಡ್; ವರದಿ ಸೋರಿಕೆ

ಸಾಂದರ್ಭಿಕ ಚಿತ್ರ ( credit: indiatoday.in)
ಹೊಸದಿಲ್ಲಿ : ಹಿಂದೂ ರಾಷ್ಟ್ರೀಯವಾದ ಮತ್ತು ಖಾಲಿಸ್ತಾನಿ ಪ್ರತ್ಯೇಕತಾವಾದವನ್ನು ಒಂಭತ್ತು ಸಂಭಾವ್ಯ ಬೆದರಿಕೆಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಪಟ್ಟಿಮಾಡಿದೆ ಎಂದು ಇಂಗ್ಲೆಂಡ್ ಗೃಹ ಕಚೇರಿಯಿಂದ ಸೋರಿಕೆಯಾಗಿರುವ ವರದಿಯನ್ನು ಆಧರಿಸಿ Indiatoday ವರದಿ ಮಾಡಿದೆ.
2024ರ ಆಗಸ್ಟ್ ನಲ್ಲಿ ಇಂಗ್ಲೆಂಡ್ ನ ಗೃಹ ಇಲಾಖೆಯ ರಾಜ್ಯ ಕಾರ್ಯದರ್ಶಿ ಯೆವೆಟ್ ಕೂಪರ್ ಸಮಿತಿಯನ್ನು ರಚಿಸಿದ್ದರು. ಸಮಿತಿಯು ಹಿಂದೂ ರಾಷ್ಟ್ರೀಯವಾದ ತೀವ್ರವಾದ ಒಂದು "ತೀವ್ರವಾದಿ ಸಿದ್ಧಾಂತ" ಎಂದು ಹೇಳುತ್ತದೆ ಎಂದು ದಿ ಗಾರ್ಡಿಯನ್ ವರದಿಯು ತಿಳಿಸಿದೆ. ಇದಲ್ಲದೆ ಬ್ರಿಟಿಷ್ ಸರಕಾರ ವರದಿಯಲ್ಲಿ ಸಂಭಾವ್ಯ ಪ್ರಬಲ ಬೆದರಿಕೆಗಳಲ್ಲಿ ಖಾಲಿಸ್ತಾನಿ ತೀವ್ರವಾದವನ್ನು ಕೂಡ ಪಟ್ಟಿ ಮಾಡಲಾಗಿದೆ.
ಬ್ರಿಟಿಷ್ ಗೃಹ ಇಲಾಖೆಯ ವರದಿಯು, "ಹಿಂದೂ ರಾಷ್ಟ್ರೀಯವಾದಿ ತೀವ್ರವಾದʼ ಸಂಭಾವ್ಯ ಬೆದರಿಕೆಯೆಂದು ಪಟ್ಟಿ ಮಾಡಿದೆ ಎಂದು ʼದಿ ಗಾರ್ಡಿಯನ್ʼ ವರದಿ ತಿಳಿಸಿದೆ. 2022ರ ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ʼಏಶ್ಯ ಕಪ್- 2022ʼರ ಪಂದ್ಯದ ವೇಳೆ ದಕ್ಷಿಣ ಏಶ್ಯ ಮೂಲದ ಬ್ರಿಟಿಷ್ ಹಿಂದೂಗಳು ಮತ್ತು ಬ್ರಿಟಿಷ್ ಮುಸ್ಲಿಮರ ನಡುವೆ ಲೀಸೆಸ್ಟರ್ ನಲ್ಲಿ ಘರ್ಷಣೆ ಬಳಿಕ ʼಹಿಂದೂ ರಾಷ್ಟ್ರೀಯವಾದ ತೀವ್ರವಾದʼವನ್ನು ಬೆದರಿಕೆ ಎಂದು ಪರಿಗಣಿಸಲಾಗಿದೆ.
ಇಂಗ್ಲೆಂಡ್ ದೇಶವು ನಿಭಾಯಿಸಬೇಕಾಗಿದೆ ಮತ್ತು ಎದುರಿಸಬೇಕಿದೆ ಎಂದು ಹೇಳಿರುವ 9 ರೀತಿಯ ಸಾಂಭವ್ಯ ಬೆದರಿಕೆಗಳ ಸೋರಿಕೆಯಾದ ಪಟ್ಟಿಯಲ್ಲಿ, ಇಸ್ಲಾಮಿಸ್ಟ್, ತೀವ್ರ ಬಲಪಂಥೀಯ, ತೀವ್ರ ಸ್ತ್ರೀದ್ವೇಷ, ಖಾಲಿಸ್ತಾನಿ ಪರ ತೀವ್ರವಾದ, ಹಿಂದೂ ರಾಷ್ಟ್ರೀಯವಾದ ತೀವ್ರವಾದ, ಪರಿಸರ ತೀವ್ರವಾದ, ಎಡಪಂಥೀಯ, ಅರಾಜಕತಾವಾದಿ ಮತ್ತು ಏಕ-ವಿಷಯದ ತೀವ್ರವಾದ, ಹಿಂಸಾಚಾರದ ಆಕರ್ಷಣೆ ಮತ್ತು ಪಿತೂರಿ ಸಿದ್ಧಾಂತಗಳು ಪಟ್ಟಿಯಲ್ಲಿದೆ ಎಂದು ಥಿಂಕ್ ಟ್ಯಾಂಕ್ (think tank)' ಪಾಲಿಸಿ ಎಕ್ಸ್ ಚೇಂಜ್ ದಾಖಲೆಯು ತಿಳಿಸುತ್ತದೆ. ಇದಲ್ಲದೆ ಕೆನಡಾ ಮತ್ತು ಅಮೆರಿಕದಲ್ಲಿ ಸಿಖ್ಖರ ವಿರುದ್ಧದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಗಳು ಸೇರಿದಂತೆ ವಿದೇಶದಲ್ಲಿ ಭಾರತದ ಕ್ರಮಗಳ ಬಗ್ಗೆ ಕಳವಳವನ್ನು ವರದಿ ಒಪ್ಪಿಕೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.







