Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. "ಪತ್ನಿಗೆ ದ್ರೋಹ ಮಾಡಿದ್ದೇನೆ": ಶಂಕಿತ...

"ಪತ್ನಿಗೆ ದ್ರೋಹ ಮಾಡಿದ್ದೇನೆ": ಶಂಕಿತ ಚೀನಾ ಗೂಢಚಾರಿ ಮಹಿಳೆಯೊಂದಿಗಿನ ವಿವಾಹೇತರ ಸಂಬಂಧ ಒಪ್ಪಿಕೊಂಡ Nvidia ಸಿಇಒ!

ಅತ್ಯಾಧುನಿಕ AI ಚಿಪ್‌ ಗಳ ಮಾಹಿತಿ ಚೀನಾಗೆ ರವಾನಿಸಿದ ಆರೋಪ; Nvidia ಮಂಡಳಿಯಿಂದ ಸ್ವತಂತ್ರ ತನಿಖೆ ಆರಂಭ

ವಾರ್ತಾಭಾರತಿವಾರ್ತಾಭಾರತಿ9 Nov 2026 8:16 AM IST
share
ಪತ್ನಿಗೆ ದ್ರೋಹ ಮಾಡಿದ್ದೇನೆ: ಶಂಕಿತ ಚೀನಾ ಗೂಢಚಾರಿ ಮಹಿಳೆಯೊಂದಿಗಿನ ವಿವಾಹೇತರ ಸಂಬಂಧ ಒಪ್ಪಿಕೊಂಡ Nvidia ಸಿಇಒ!

ಹೊಸದಿಲ್ಲಿ: ಜಗತ್ತಿನ ಪ್ರಮುಖ ತಂತ್ರಜ್ಞಾನ ಕಂಪೆನಿಗಳಲ್ಲಿ ಒಂದಾದ Nvidia ಸಿಇಒ ಜೆನ್ಸೆನ್ ಹುವಾಂಗ್, ಚೀನಾದ ಗೂಢಚಾರಿ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಶಂಕಿಸಿರುವ ಮಹಿಳೆಯೊಬ್ಬರೊಂದಿಗಿನ ವಿವಾಹೇತರ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. 'ನಾನು ನನ್ನ ಪತ್ನಿಗೆ ದ್ರೋಹ ಮಾಡಿದ್ದೇನೆ. ನನ್ನ ಕೃತ್ಯಕ್ಕೆ ಯಾವುದೇ ಸಮರ್ಥನೆಯಿಲ್ಲ' ಎಂದು ಹೇಳಿರುವ ಅವರು, ಪತ್ನಿ ಮತ್ತು ಮಕ್ಕಳಲ್ಲಿ ಕ್ಷಮೆ ಕೋರಿದ್ದಾರೆ. ತಮ್ಮ ನಡೆಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಹುವಾಂಗ್, ಉದ್ಯೋಗಿಗಳು ಹಾಗೂ ಸಹೋದ್ಯೋಗಿಗಳ ಕ್ಷಮೆಯನ್ನೂ ಯಾಚಿಸಿದ್ದಾರೆ.

ಹುವಾಂಗ್ ಅವರ ವೈಯಕ್ತಿಕ ಸಂಬಂಧದ ವಿಚಾರದ ಜತೆಗೆ, ಚೀನಾದ ಗೂಢಚಾರಿ ಜಾಲದೊಂದಿಗೆ ಅವರ ಸಂಪರ್ಕದ ಆರೋಪವೂ ಚರ್ಚೆಗೆ ಕಾರಣವಾಗಿದೆ. Nvidia ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಚಿಪ್‌ ಗಳು ಮತ್ತು ಗುಪ್ತಚರ ಮಾಹಿತಿಯನ್ನು ಚೀನಾಗೆ ರವಾನಿಸಿರುವ ಆರೋಪಗಳ ಹಿನ್ನೆಲೆಯಲ್ಲಿ ಕಂಪೆನಿಯ ನಿರ್ದೇಶಕರ ಮಂಡಳಿ ಸ್ವತಂತ್ರ ತನಿಖೆ ಆರಂಭಿಸಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹುವಾಂಗ್ ತಿಳಿಸಿದ್ದಾರೆ.

ಚೀನಾ ಗೂಢಚಾರಿ ಸಂಚಿನ ಗುರಿಯಾಗಿದ್ದ ಹುವಾಂಗ್?

ಅಕ್ಟೋಬರ್ 29ರಂದು 'ದಿ ನ್ಯೂಯಾರ್ಕ್ ಟೈಮ್ಸ್' ಪ್ರಕಟಿಸಿದ ವರದಿಯ ಪ್ರಕಾರ, ಜೆನ್ಸೆನ್ ಹುವಾಂಗ್ ಚೀನಾದ ಗೂಢಚಾರಿ ಸಂಚೊಂದರ ಗುರಿಯಾಗಿದ್ದರು. ಚೀನಾದ ಪ್ರಜೆಯಾಗಿರುವ ಉದ್ಯಮಿ ಆಲಿಸ್ ಹುವಾಂಗ್ ಈ ಸಂಚನ್ನು ಸಂಘಟಿಸಿದ್ದರು ಎನ್ನಲಾಗಿದೆ.

ಆಲಿಸ್ ಹುವಾಂಗ್, ಜೆನ್ಸೆನ್ ಹುವಾಂಗ್ ಅವರೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡು, Nvidiaದ ಅತ್ಯಾಧುನಿಕ AI ಚಿಪ್‌ ಗಳು ಹಾಗೂ ಗುಪ್ತಚರ ಮಾಹಿತಿಯನ್ನು ಬೀಜಿಂಗ್‌ ಗೆ ರವಾನಿಸುತ್ತಿದ್ದರು ಎಂದು ವರದಿ ಆರೋಪಿಸಿತ್ತು.

ಸಿಂಗಾಪುರ ಮೂಲದ ಡೇಟಾ ಸೆಂಟರ್ ಕಂಪೆನಿ 'ಮೆಗಾಸ್ಪೀಡ್'ನಲ್ಲಿ ಉನ್ನತ ಅಧಿಕಾರಿಯಾಗಿದ್ದ ಆಲಿಸ್ ಹುವಾಂಗ್ ಅವರನ್ನು ಚೀನಾ ಪರವಾಗಿ ಕಾರ್ಯನಿರ್ವಹಿಸುವ ಗುಪ್ತಚರ ವ್ಯಕ್ತಿ (Intelligence Asset) ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಗುರುತಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

'ನನ್ನ ತಪ್ಪಿಗೆ ನಾನೇ ಹೊಣೆ'

'ಆಕ್ಸಿಯೋಸ್' ಸುದ್ದಿ ಸಂಸ್ಥೆ ಪಡೆದುಕೊಂಡಿರುವ ಇಮೇಲ್‌ ನಲ್ಲಿ ಹುವಾಂಗ್ ತಮ್ಮ ವೈಯಕ್ತಿಕ ತಪ್ಪನ್ನು ಒಪ್ಪಿಕೊಂಡಿದ್ದಾರೆ. 'ನಮ್ಮ ಕಂಪೆನಿಗೆ ಒಂದು ಸಂದೇಶ' (A message to our company) ಎಂಬ ಶೀರ್ಷಿಕೆಯೊಂದಿಗೆ ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್‌ ನಲ್ಲಿ ಕುಟುಂಬದವರಲ್ಲಿ ಕ್ಷಮೆ ಕೋರಿದ್ದಾರೆ.

'ನಾನು ನನ್ನ ಕುಟುಂಬದವರಲ್ಲಿ ಮತ್ತು ನಿಮ್ಮೆಲ್ಲರಲ್ಲಿ ಕ್ಷಮೆ ಕೇಳಬೇಕಿದೆ. ನಾನು ನನ್ನ ಪತ್ನಿಗೆ ದ್ರೋಹ ಮಾಡಿದ್ದೇನೆ. ನನ್ನ ಈ ಕೃತ್ಯದಿಂದ ಪತ್ನಿ ಮತ್ತು ಮಕ್ಕಳಿಗೆ ನೋವಾಗಿದೆ. ನಾನು ಮಾಡಿದ್ದಕ್ಕೆ ಯಾವುದೇ ಸಮರ್ಥನೆಯಿಲ್ಲ. ನನ್ನ ಕೃತ್ಯದ ಬಗ್ಗೆ ತೀವ್ರ ವಿಷಾದವಿದೆ.

ನನ್ನ ಜೀವನದುದ್ದಕ್ಕೂ ಕುಟುಂಬದವರು ಪ್ರೀತಿ ಮತ್ತು ಬೆಂಬಲ ನೀಡಿದ್ದಾರೆ. ನನ್ನಿಂದ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ನಿರೀಕ್ಷಿಸುವ ಹಕ್ಕು ಅವರಿಗಿದೆ. ಆದರೆ, ನಾನು ಅವರನ್ನು ನಿರಾಸೆಗೊಳಿಸಿದ್ದೇನೆ. ನಾವು ಒಟ್ಟಾಗಿ ಕಟ್ಟಿಕೊಂಡ ಜೀವನಕ್ಕೆ ಧಕ್ಕೆ ತಂದಿದ್ದೇನೆ. ನನ್ನ ಕೃತ್ಯಕ್ಕೆ ಮತ್ತು ಅದರಿಂದ ಉಂಟಾದ ನೋವಿಗೆ ನಾನೇ ಸಂಪೂರ್ಣ ಹೊಣೆಗಾರ. ನನ್ನ ವಿರುದ್ಧ ವ್ಯಕ್ತವಾಗುವ ಟೀಕೆಗಳನ್ನೂ ಸ್ವೀಕರಿಸುತ್ತೇನೆ.

ನನ್ನ ಪತ್ನಿ ಮತ್ತು ಕುಟುಂಬದವರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಾನು ಮಾಡಿದ ತಪ್ಪನ್ನು ಕ್ಷಮೆಯಾಚನೆಯಿಂದ ಸರಿಪಡಿಸಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿದೆ. ನಮ್ಮ ಕುಟುಂಬ ಈ ನೋವಿನಿಂದ ಚೇತರಿಸಿಕೊಳ್ಳಲಿದೆ ಮತ್ತು ಕಾಲಕ್ರಮೇಣ ನಿಮ್ಮ ವಿಶ್ವಾಸವನ್ನು ಮತ್ತೆ ಗಳಿಸಲು ನನಗೆ ಸಾಧ್ಯವಾಗಬಹುದು ಎಂಬ ಭರವಸೆಯಿದೆ' ಎಂದು ಬರೆದಿದ್ದಾರೆ.

ಉದ್ಯೋಗಿಗಳ ವಿಶ್ವಾಸ ಮರಳಿ ಗಳಿಸುವುದಾಗಿ ಭರವಸೆ

'ದಶಕಗಳಿಂದ ನನ್ನೊಂದಿಗೆ ಕೆಲಸ ಮಾಡುತ್ತಿರುವವರೂ ಸೇರಿದಂತೆ Nvidiaದ ಎಲ್ಲ ಸಹೋದ್ಯೋಗಿಗಳು, ವಿಶ್ವದಾದ್ಯಂತ ಇರುವ ನಮ್ಮ ಆಡಳಿತ ಮಂಡಳಿ, ಪಾಲುದಾರರು ಮತ್ತು ಷೇರುದಾರರು ನನ್ನಿಂದ ಉತ್ತಮ ನಡವಳಿಕೆಯನ್ನು ನಿರೀಕ್ಷಿಸುವ ಹಕ್ಕು ಹೊಂದಿದ್ದಾರೆ.

Nvidiaವನ್ನು ಮುನ್ನಡೆಸುವುದು ನನ್ನ ಜೀವನದ ದೊಡ್ಡ ಸೌಭಾಗ್ಯ. ನಿಮಗೆ ಸೇವೆ ಸಲ್ಲಿಸುವುದು ಮತ್ತು ನಿಮ್ಮ ವಿಶ್ವಾಸಕ್ಕೆ ಅರ್ಹನಾಗಿರುವುದು ನನ್ನ ಜವಾಬ್ದಾರಿ. ಆದರೆ, ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲನಾಗಿದ್ದೇನೆ. Nvidiaಗೆ ನಾನು ಸಂಪೂರ್ಣ ಬದ್ಧನಾಗಿದ್ದೇನೆ. ನಿಮ್ಮ ವಿಶ್ವಾಸವನ್ನು ಮರಳಿ ಗಳಿಸಲು ಕೆಲಸ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.

ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಬದ್ಧ ಎಂದ ಹುವಾಂಗ್

'ಸುದ್ದಿ ವರದಿಗಳಲ್ಲಿ ಪ್ರಸ್ತಾಪವಾಗಿರುವ ರಾಷ್ಟ್ರೀಯ ಭದ್ರತೆಯ ಕಳವಳಗಳ ಕುರಿತು Nvidiaದ ನಿರ್ದೇಶಕರ ಮಂಡಳಿ ಸ್ವತಂತ್ರ ತನಿಖೆ ಆರಂಭಿಸಿದೆ. ಈ ತನಿಖೆಯನ್ನು ನಾನು ಬೆಂಬಲಿಸುತ್ತೇನೆ ಮತ್ತು ಸಂಪೂರ್ಣ ಸಹಕಾರ ನೀಡುತ್ತೇನೆ.

ನಾನು ನಮ್ಮ ದೇಶವನ್ನು ಮತ್ತು ನಮ್ಮ ಕಂಪೆನಿಯನ್ನು ಪ್ರೀತಿಸುತ್ತೇನೆ. Nvidiaವನ್ನು ರಕ್ಷಿಸುವುದರ ಜತೆಗೆ ಅಮೆರಿಕದ ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸಲು ಬದ್ಧನಾಗಿದ್ದೇನೆ. ಅಮೆರಿಕದ ಪ್ರಜೆಯಾಗಿರುವುದಕ್ಕೆ ಹೆಮ್ಮೆ ಮತ್ತು ಕೃತಜ್ಞತೆ ಹೊಂದಿದ್ದೇನೆ.

ನನ್ನ ವೈಯಕ್ತಿಕ ನಿರ್ಧಾರಗಳಿಗೆ ನನ್ನ ಕುಟುಂಬ ಯಾವುದೇ ರೀತಿಯಲ್ಲೂ ಹೊಣೆಗಾರರಲ್ಲ. ಅದಕ್ಕೆ ನಾನೇ ಜವಾಬ್ದಾರ. ದಯವಿಟ್ಟು ನನ್ನ ಕುಟುಂಬದ ಖಾಸಗಿತನವನ್ನು ಗೌರವಿಸಿ' ಎಂದು ಹುವಾಂಗ್ ಮನವಿ ಮಾಡಿದ್ದಾರೆ.

'ಆಂತರಿಕ ಕಾರ್ಪೊರೇಟ್ ವಿಷಯ': ರುಬಿಯೊ

ಚೀನಾದ ಗುಪ್ತಚರ ಸಂಸ್ಥೆಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿರುವ ಮಹಿಳೆಯೊಂದಿಗಿನ ವಿವಾಹೇತರ ಸಂಬಂಧವನ್ನು ಹುವಾಂಗ್ ಒಪ್ಪಿಕೊಂಡ ಬೆನ್ನಲ್ಲೇ, Nvidiaದ ನಿರ್ದೇಶಕರ ಮಂಡಳಿ ರವಿವಾರ ಸ್ವತಂತ್ರ ತನಿಖೆ ಆರಂಭಿಸಿರುವುದಾಗಿ ಘೋಷಿಸಿದೆ.

ಈ ಕುರಿತು ರವಿವಾರ ಪ್ರತಿಕ್ರಿಯೆ ಕೇಳಿದಾಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇದು 'ಆಂತರಿಕ ಕಾರ್ಪೊರೇಟ್ ವಿಷಯ' ಎಂದು ಅವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X