ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುವೆ: ಅನಿಲ್ ಆ್ಯಂಟನಿ

ಹೊಸದಿಲ್ಲಿ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಮರುದಿನ ಪ್ರತಿಕ್ರಿಯಿಸಿರುವ ಅನುಭವಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಎ.ಕೆ .ಆಂಟನಿ ಅವರ ಪುತ್ರ ಅನಿಲ್ ಆಂಟನಿ, ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿಯನ್ನು ಮುಂದುವರಿಸಲು ಹಾಗೂ ಭಾರತವನ್ನು 2047 ರ ಶತಮಾನೋತ್ಸವ ಸ್ವಾತಂತ್ರ್ಯದ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.
ರವಿವಾರ ಎಎನ್ ಐ ಜೊತೆ ಮಾತನಾಡಿದ ಬಿಜೆಪಿ ನಾಯಕ ಅನಿಲ್ ಆ್ಯಂಟನಿ, "ಪಕ್ಷದ ನಾಯಕತ್ವದ ನನಗೆ ತೋರಿಸಿದ ಬೆಂಬಲ ಹಾಗೂ ಆತ್ಮವಿಶ್ವಾಸದಿಂದ ನಾನು ಸಂತುಷ್ಟನಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ-ಜಿ, ಅಮಿತ್ ಶಾ-ಜಿ, ಮತ್ತು ನಡ್ಡಾ-ಜಿ ಅವರಿಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ಬೆಂಬಲಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಹಾಗೂ ಇಷ್ಟು ವರ್ಷಗಳಲ್ಲಿ ನನ್ನ ರಾಜಕೀಯ ಪ್ರಯಾಣದಲ್ಲಿ ನನಗೆ ಮಾರ್ಗದರ್ಶನ ನೀಡಿದವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
"ಇದು ನಮಗೆ ಬಹಳ ಮುಖ್ಯವಾದ ವರ್ಷವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರೂ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ, ನಮ್ಮ ಪಕ್ಷವು 2014 ಮತ್ತು 2019 ಕ್ಕಿಂತ ಹೆಚ್ಚುಇನ್ನೂ ದೊಡ್ಡ ಜನಾದೇಶದೊಂದಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿದೆ ಎಂದು ನನಗೆ ಖಾತ್ರಿಯಿದೆ''ಎಂದು ಅನಿಲ್ ಆ್ಯಂಟನಿ ಹೇಳಿದ್ದಾರೆ.





