ಐಐಟಿ ರೂರ್ಕಿ ವಿದ್ಯಾರ್ಥಿ ಆತ್ಮಹತ್ಯೆ: 70 ಪರೀಕ್ಷೆಗಳು ಮುಂದೂಡಿಕೆ

Photo Credit: FB/IIT Roorkee
ಡೆಹ್ರಾಡೂನ್: ಐಐಟಿ ರೂರ್ಕಿಯಲ್ಲಿ 20 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಸಂಸ್ಥೆ 70 ಪರೀಕ್ಷೆಗಳನ್ನು ನವೆಂಬರ್ 22ಕ್ಕೆ ಮುಂದೂಡಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಈ ಪರೀಕ್ಷೆಗಳು ಶುಕ್ರವಾರ ನಡೆಯಬೇಕಿತ್ತು ಎಂದು ಅವರು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಆಯುಷ್ ರಾಜೋರಿಯಾ ಎಂದು ಗುರುತಿಸಲಾಗಿದ್ದು, ಈತ ಸಂಸ್ಥೆಯ ಗಣಿತ ಮತ್ತು ಕಂಪ್ಯೂಟಿಂಗ್ ವಿಷಯದ ಬಿಎಸ್-ಎಂಎಸ್ ಕೋರ್ಸ್ನ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ. ಈತ ಉತ್ತರ ಪ್ರದೇಶದ ಘಾಝಿಯಾಬಾದ್ನ ರಾಜ್ನ ನಗರ್ ಎಕ್ಸ್ಟೆನ್ಸನ್ನ ನಿವಾಸಿಯಾಗಿದ್ದ.
ಐಐಟಿ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸೋನಿಕಾ ಶ್ರೀವಾಸ್ತವ, ಪರೀಕ್ಷೆ ಮುಂದೂಡಿಕೆ ಮತ್ತು ಪರಿಷ್ಕೃತ ದಿನಾಂಕದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Next Story




