ಹೊಸದಿಲ್ಲಿ | ಪಾಕಿಸ್ತಾನ ಹೈಕಮಿಷನ್ನ ಮತ್ತೋರ್ವ ಅಧಿಕಾರಿಗೆ ದೇಶ ತೊರೆಯುವಂತೆ ಸೂಚಿಸಿದ ಭಾರತ

Photo | timesofindia
ಹೊಸದಿಲ್ಲಿ : ಭಾರತದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನ್ನ ಮತ್ತೋರ್ವ ಅಧಿಕಾರಿಯನ್ನು ದೇಶ ತೊರೆಯುವಂತೆ ಭಾರತ ಬುಧವಾರ ಸೂಚಿಸಿದೆ.
ಭಾರತದಲ್ಲಿ ಅಧಿಕೃತ ಸ್ಥಾನಮಾನಕ್ಕೆ ಅನುಗುಣವಾಗಿಲ್ಲದ ಚಟುವಟಿಕೆಯ ಕಾರಣ 24 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಅಧಿಕಾರಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಮೇ 13ರಂದು ಬೇಹುಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ಪಾಕಿಸ್ತಾನದ ಹೈಕಮಿಷನ್ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನದ ಅಧಿಕಾರಿಯನ್ನು ಭಾರತ ಹೊರಹಾಕಿತ್ತು.
Next Story





