‘ಇಂಡಿಯಾ ಗಾಟ್ ಲೇಟೆಂಟ್’ ಪ್ರಕರಣ | ಹೇಳಿಕೆ ದಾಖಲಿಸಲು ಎನ್‌ಸಿಡಬ್ಲ್ಯು ಮಂದೆ ಹಾಜರಾದ ರಣವೀರ್ ಅಲಹಾಬಾದಿಯ , ಅಪೂರ್ವ ಮುಖಿಜಾ

ಮುಂಬೈ: ‘ಇಂಡಿಯಾ ಗಾಟ್ ಲೇಟೆಂಟ್’ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಕುರಿತಂತೆ ಯುಟ್ಯೂಬರ್ ರಣವೀರ್ ಅಲಹಾಬಾದಿಯಾ ಹಾಗೂ ಅಪೂರ್ವ ಮುಖಿಜಾ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ಕಿಶೋರ್ ರಹಟ್ಕಾರ್ ಅವರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.
‘ಇಂಡಿಯಾ ಗಾಟ್ ಲೇಟೆಂಟ್’ ಕಾರ್ಯಕ್ರಮದ ಸಂಚಿಕೆಯಲ್ಲಿ ರಣವೀರ್ ಅಲಹಾಬಾದಿಯಾ ನೀಡಿದ ವಿವಾದಾದ್ಮಕ ಹೇಳಿಕೆಗೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಎನ್‌ಸಿಡಬ್ಲ್ಯು ಕಚೇರಿಯಲ್ಲಿ ಕಂಟೆಂಟ್ ಕ್ರಿಯೇಟರ್ ಆಶಿಶ್ ಚಂಚಲಾನಿ ಕೂಡ ಉಪಸ್ಥಿತರಿದ್ದರು.
‘ಇಂಡಿಯಾ ಗಾಟ್ ಲೇಟೆಂಟ್’ನ ಇಬ್ಬರು ನಿರ್ಮಾಕರಾದ ಸೌರಭ್ ಭೋಥ್ರಾ ಹಾಗೂ ತುಷಾರ್ ಪೂಜಾರಿ ಕೂಡ ಎನ್‌ಸಿಡಬ್ಲ್ಯು ಕಚೇರಿಯಲ್ಲಿ ಹಾಜರಿದ್ದರು. ಯುಟ್ಯೂಬರ್‌ಗಳ ವಕೀಲರು ಕೂಡ ಎನ್‌ಸಿಡಬ್ಲ್ಯು ಕಚೇರಿಯ ಆವರಣದಲ್ಲಿರುವುದು ಕಂಡು ಬಂತು.
ಈ ಹಿಂದೆ ಎನ್‌ಸಿಡಬ್ಲ್ಯು ಅಲಹಾಬಾದಿಯಾ, ರೈನಾ ಹಾಗೂ ಇತರರಿಗೆ ಫೆಬ್ರವರಿ 17ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಅದು ರಣವೀರ್ ಅಲಹಾಬಾದಿಯಾ, ಸಮಯ್ ರೈನಾ, ಅಪೂರ್ವ ಮುಖಿಜಾ, ಜಸ್ಪ್ರೀತ್ ಸಿಂಗ್, ಆಶಿಷ್ ಚಂಚಲಾನಿ, ತುಷಾರ್ ಪೂಜಾರಿ, ಸೌರಭ್ ಬೋಥ್ರಾ ಹಾಗೂ ಬಾಲರಾಜ್ ಘಾ ಅವರಿಗೆ ಅಧ್ಯಕ್ಷರ ಮುಂದೆ ಹಾಜರಾಗುವಂತೆ ಹಾಗೂ ಹೇಳಿಕೆ ದಾಖಲಿಸುವಂತೆ ಸೂಚಿಸಿತ್ತು.
ಆದರೆ, ಸುರಕ್ಷೆಯ ಕಳವಳ ಹಾಗೂ ಇತರ ಸಂಚಾರ ಸಮಸ್ಯೆಯಿಂದಾಗಿ ಹಲವರು ಖುದ್ದಾಗಿ ಹಾಜರಾಗಲು ವಿಫಲರಾಗಿದ್ದಾರೆ. ಅಲಹಾಬಾದಿಯಾ ಅವರ ವಿಚಾರಣೆಯನ್ನು ಅನಂತರ ಮಾರ್ಚ್ 6ಕ್ಕೆ ಮುಂದೂಡಲಾಗಿತ್ತು. ಜೀವಬೆದರಿಗೆ ಉಲ್ಲೇಖಿಸಿ ಮೂರು ವಾರಗಳ ಕಾಲ ಮುಂದೂಡುವಂತೆ ಆತ ಮನವಿ ಮಾಡಿದ ಬಳಿಕ ಮಾರ್ಚ್ 6ಕ್ಕೆ ನಿಗದಿಪಡಿಸಲಾಗಿತ್ತು.







