ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ 41,000 ಪೈಲಟ್ಗಳ ಅಗತ್ಯವಿದೆ: ಏರ್ಬಸ್ ಮುನ್ಸೂಚನೆ
ಸಾಂದರ್ಭಿಕ ಚಿತ್ರ | Photo: PTI
ಹೈದರಾಬಾದ್: ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ 2,840 ಹೊಸ ವಿಮಾನಗಳು ಮತ್ತು 41,000 ಪೈಲಟ್ಗಳು ಮತ್ತು 47,000 ತಾಂತ್ರಿಕ ಸಿಬ್ಬಂದಿಯ ಅಗತ್ಯವಿರುತ್ತದೆ ಎಂದು ಏರ್ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲಾರ್ಡ್ ಗುರುವಾರ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಭಾರತವು ಮುಂದಿನ ದಶಕಗಳಲ್ಲಿ ಜಾಗತಿಕ ವಾಯುಯಾನಕ್ಕೆ ಶಕ್ತಿ ತುಂಬುವ ಶಕ್ತಿಯಾಗಿ ಬೆಳೆಯಲಿದೆ. ಭಾರತದಲ್ಲಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಯ ಅಗತ್ಯತೆಗಳನ್ನು ಪೂರೈಸಲು ಮುಂದಿನ 20 ವರ್ಷಗಳಲ್ಲಿ 2,840 ಹೊಸ ವಿಮಾನಗಳ ಅಗತ್ಯವಿದೆ" ಎಂದು ಅವರು ಹೇಳಿದರು.
A 350 ಏರ್ ಬಸ್ ವಿಮಾನವು ಭಾರತದಲ್ಲಿ ಅಂತರಾಷ್ಟ್ರೀಯ ಪ್ರಯಾಣದಲ್ಲಿ ಕ್ರಾಂತಿಯ ವೇಗವರ್ಧಕವಾಗಿದೆ. ಈಗಾಗಲೇ ಏರ್ ಬಸ್ ನೂತನ ಮಾದರಿ ಆರು ವಿಮಾನಗಳನ್ನು ಕಳೆದ ವರ್ಷ ಏರ್ ಇಂಡಿಯಾಕ್ಕೆ ತಲುಪಿಸಲಾಗಿದೆ ಎಂದು ಅವರು ಹೇಳಿದರು.
ಮುಂದಿನ 20 ವರ್ಷಗಳಲ್ಲಿ ಭಾರತವು ವಾರ್ಷಿಕವಾಗಿ 6.2 ರಷ್ಟು ಬೆಳವಣಿಗೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿಯಲಿದೆ ಎಂದು ಮೈಲಾರ್ಡ್ ಭವಿಷ್ಯ ನುಡಿದಿದ್ದಾರೆ.