ಕೇರಳ ಕರಾವಳಿ ಪ್ರದೇಶದಲ್ಲಿ ಮುಳುಗಿದ ನೌಕೆ | ತೈಲ ಸೋರಿಕೆ ತಡೆಯಲು ಮೂರು ಕೋಸ್ಟ್ ಗಾರ್ಡ್ ಹಡಗುಗಳ ನಿಯೋಜನೆ: ಸೋನೊವಾಲ್

Photo credit: PTI
ಹೊಸದಿಲ್ಲಿ: ಕೊಚ್ಚಿ ಬಳಿಯ ಕೇರಳ ಕರಾವಳಿ ತೀರದಲ್ಲಿ ಮುಳುಗಿದ ಲಿಬರಿಯನ್ ನ ಎಂಎಸ್ಸಿ ಇಎಲ್ಎಸ್ಎ III ಸರಕು ನೌಕೆಯಿಂದ ಸೋರಿಕೆಯಾಗುತ್ತಿರುವ ತೈಲದಿಂದ ಉಂಟಾಗಲಿರುವ ಸಮುದ್ರ ಮಾಲಿನ್ಯ ದುರಂತವನ್ನು ತಪ್ಪಿಸುವ ತುರ್ತು ವಿವಿಧ ಸಂಸ್ಥೆಗಳ ಪ್ರಯತ್ನದ ಭಾಗವಾಗಿ ಭಾರತೀಯ ಕರಾವಳಿ ರಕ್ಷಣಾ ಪಡೆಯು ಮೂರು ಬೃಹತ್ ಹಡಗುಗಳಾದ ಐಸಿಜಿ ಸಮರ್ಥ್, ಐಸಿಜಿ ಸಕ್ಷಮ್ ಹಾಗೂ ಐಸಿಜಿ ವಿಕ್ರಂ ಅನ್ನು ನಿಯೋಜಿಸಲಾಗಿದೆ ಎಂದು ಸೋಮವಾರ ಕೇಂದ್ರ ಬಂದರುಗಳು, ಸರಕು ಸಾಗಣೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ. ತೈಲ ಸೋರಿಕೆ ಹಾಗೂ ಒಡೆದು ಹೋಗಿರುವ ಕಂಟೈನರ್ ಗಳಿಂದ ಉದ್ಭವಿಸಲಿರುವ ಯಾವುದೇ ಬಗೆಯ ಅಪಾಯದಿಂದ ಕರಾವಳಿ ಪರಿಸರವನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳವಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕೊಚ್ಚಿ ಬಳಿಯ ಕರಾವಳಿ ತೀರದಲ್ಲಿ ಲಿಬರಿಯನ್ ನ ಎಂಎಸ್ಸಿ ಇಎಲ್ಎಸ್ಎ III ಸರಕು ನೌಕೆ ಮುಳುಗಿದ ಹಡಗಿದ ಉದ್ಭವಿಸಿರುವ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಸರಕು ಸಾಗಣೆ ಪ್ರಧಾನ ನಿರ್ದೇಶಕರು, ಸರಕು ಸಾಗಣೆ ಕಾರ್ಯದರ್ಶಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳೊಂದಿಗೆ ಅವರು ವಿಸ್ತೃತ ಪರಾಮರ್ಶೆ ಸಭೆ ನಡೆಸಿದರು. ಸಭೆಯ ನಂತರ, ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವ ಸರ್ಬಾನಂದ್ ಸೋನೊವಾಲ್, “13 ಕಂಟೈನರ್ ಗಳಲ್ಲಿ ಸಾಗಣೆ ಮಾಡಲಾಗುತ್ತಿದ್ದ ಸಮುದ್ರ ತೈಲ ಹಾಗೂ ಇನ್ನಿತರ ಅಪಾಯಕಾರಿ ವಸ್ತುಗಳನ್ನು ಪೂರ್ಣಪ್ರಮಾಣದಲ್ಲಿ ರಕ್ಷಿಸುವುದನ್ನು ಖಾತರಿ ಪಡಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಭಾರತೀಯ ಕರಾವಳಿ ರಕ್ಷಣಾ ಪಡೆಯ ನೆರವಿನೊಂದಿಗೆ ಹಡಗಿನ ಎಲ್ಲ ಸಿಬ್ಬಂದಿಗಳನ್ನೂ ಸುರಕ್ಷಿತವಾಗಿ ಪಾರು ಮಾಡಲಾಗಿದೆ” ಎಂದು ಹೇಳಿದ್ದಾರೆ. ಮೇ 26ರಂದು ವಿಳಿಂಜಮ್ ನಿಂದ ಕೊಚ್ಚಿ ತೀರವನ್ನು ಸಮೀಪಿಸುತ್ತಿದ್ದಾಗ, ಲಿಬರಿಯನ್ ಫ್ಲ್ಯಾಗ್ ಕ್ಯಾರಿಯರ್ ನೌಕೆ ವಾಲಿಕೊಂಡಿದ್ದರಿಂದ ಸಮುದ್ರ ತೈಲ ಹಾಗೂ ಇನ್ನಿತರ ಅಪಾಯಕಾರಿ ವಸ್ತುಗಳನ್ನು ಹೊಂದಿದ್ದ 13 ಕಂಟೈನರ್ ಗಳು ಸಮುದ್ರಕ್ಕೆ ಬಿದ್ದಿದ್ದವು.
Next Story





