ವಿಯೆಟ್ನಾಂನಲ್ಲಿ ಭೀಕರ ಅಪಘಾತ : ಭಾರತೀಯ ಮೂಲದ ವಿದ್ಯಾರ್ಥಿ ಮೃತ್ಯು

Photo | NDTV
ಹೈದರಾಬಾದ್: ವಿಯೆಟ್ನಾಂನ ಕ್ಯಾನ್ ಥೋ ನಗರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾರತೀಯ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಅರ್ಷಿದ್ ಆಶ್ರಿತ್ ಮೃತ ಎಂಬಿಬಿಎಸ್ ವಿದ್ಯಾರ್ಥಿ. ಇವರು ತೆಲಂಗಾಣದ ಕುಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯ ನಿವಾಸಿಯಾಗಿದ್ದಾರೆ.
ಅರ್ಷಿದ್ ಸಂಚರಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹಿಂಬದಿ ಸವಾರನಾಗಿದ್ದ ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ಭಯಾನಕ ದೃಶ್ಯಗಳು ಸೆರೆಯಾಗಿದೆ.
ಶಾಸಕ ಡಾ.ಪಿ.ಹರೀಶ್ ಬಾಬು ಅವರು ಆಶ್ರಿತ್ ಅವರ ನಿವಾಸಕ್ಕೆ ಭೇಟಿ ನೀಡಿ ದುಃಖಿತ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮೃತದೇಹವನ್ನು ಭಾರತಕ್ಕೆ ಕರೆತರಲು ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
A medical student from Telangana died in an accident in Vietnam's Can Tho City on Tuesday, June 3.
— The Siasat Daily (@TheSiasatDaily) June 5, 2025
The deceased was identified as 21-year-old Arshid Ashrit, a native of KumaramBheem Asifabad. The accident occurred when Arshid was riding a bike at a high speed along with his… pic.twitter.com/FrJlZBrff6







