ಬಾಂಗ್ಲಾದೇಶಿ ಉಡುಪು, ಸಂಸ್ಕರಿತ ಆಹಾರ ಆಮದಿಗೆ ಭಾರತದ ಬಂದರುಗಳಲ್ಲಿ ನಿರ್ಬಂಧ

ಸಾಂದರ್ಭಿಕ ಚಿತ್ರ PC: freepik
ಹೊಸದಿಲ್ಲಿ: ಸಿದ್ಧ ಉಡುಪು ಮತ್ತು ಸಂಸ್ಕರಿತ ಆಹಾರ ಸೇರಿದಂತೆ ಬಾಂಗ್ಲಾದೇಶದಿಂದ ಹಲವು ಸರಕುಗಳ ಆಮದಿನ ಮೇಲೆ ಭಾರತ ಶನಿವಾರ ನಿರ್ಬಂಧ ವಿಧಿಸಿದೆ.
ವಾಣಿಜ್ಯ ಸಚಿವಾಲಯದ ಅಧೀನದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಅನ್ವಯ, "ಸಿದ್ಧ ಉಡುಪುಗಳು, ಸಂಸ್ಕರಿತ ಆಹಾರ ವಸ್ತುಗಳು ಇತ್ಯಾದಿ ಸೇರಿದಂತೆ ಬಾಂಗ್ಲಾದೇಶದಿಂದ ಕೆಲ ನಿರ್ದಿಷ್ಟ ಸರಕುಗಳ ಆಮದಿನ ಮೇಲೆ ಬಂದರು ನಿರ್ಬಂಧ ವಿಧಿಸಲಾಗಿದೆ" ಎಂದು ಸ್ಪಷ್ಟಪಡಿಸಲಾಗಿದೆ.
ಆದರೆ ಭಾರತದ ಮೂಲಕ ನೇಪಾಳ ಮತ್ತು ಭೂತಾನ್ ಗೆ ವರ್ಗಾಂತರಗೊಳ್ಳುವ ಬಾಂಗ್ಲಾದೇಶಿ ಸರಕುಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ.
Next Story





