ಲೋಕಸಭೆ ಅಧಿವೇಶನ | ಅನುರಾಗ್ ಠಾಕೂರ್ ಧರಿಸಿದ್ದ ʼಐಷಾರಾಮಿ Louis Vuitton ಬೆಲ್ಟ್ʼ ವೈರಲ್!

Photo source: freepressjournal.in | Sansad TV
ಹೊಸದಿಲ್ಲಿ: ಲೋಕಸಭೆಯ ಬಜೆಟ್ ಅಧಿವೇಶನದ ವೇಳೆ BJP ನಾಯಕ ಹಾಗೂ ಸಂಸತ್ ಸದಸ್ಯ ಅನುರಾಗ್ ಠಾಕೂರ್ ಅವರಿಗೆ ಸಂಬಂಧಿಸಿದ 13 ಸೆಕೆಂಡುಗಳ ಒಂದು ಸಣ್ಣ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿಶೇಷವೆಂದರೆ ಈ ವೀಡಿಯೊ ಗಮನ ಸೆಳೆದಿರುವುದು ರಾಜಕೀಯ ಭಾಷಣ ಅಥವಾ ಬಿಸಿ ಬಿಸಿ ಚರ್ಚೆಗಾಗಿ ಅಲ್ಲ; ಬದಲಿಗೆ ಅನುರಾಗ್ ಠಾಕೂರ್ ಅವರ ʼಐಷಾರಾಮಿ ಡಿಸೈನರ್ ಲೂಯಿ ವಿಟಾನ್ ಬೆಲ್ಟ್ʼ ಕಾರಣಕ್ಕಾಗಿ!
ವೈರಲ್ ಆಗಿರುವ ವೀಡಿಯೊದಲ್ಲಿ ಸಂಸತ್ತಿನಲ್ಲಿ ಘೋಷಣೆಗಳ ಗದ್ದಲದ ನಡುವೆ ಠಾಕೂರ್ ಮಾತನಾಡಲು ಎದ್ದು ನಿಂತ ದೃಶ್ಯ ಕಾಣಿಸುತ್ತದೆ. ಅವರು ಎದ್ದು ನಿಂತ ಕ್ಷಣದಲ್ಲಿ ಅವರ ಲೂಯಿ ವಿಟಾನ್ ಬೆಲ್ಟ್ ಗೋಚರಿಸಿರುವುದನ್ನು ಜನರು ಗಮನಿಸಿದ್ದಾರೆ. ತಕ್ಷಣವೇ ಅವರು ಕುಳಿತುಕೊಂಡು, ಬಳಿಕ ಮತ್ತೆ ಎದ್ದು ನಿಂತು ಮಾತನಾಡಲು ಮುಂದಾದಾಗ ತಮ್ಮ ಬ್ಲೇಝರ್ ಅನ್ನು ಕೆಳಗೆ ಎಳೆದು ಬೆಲ್ಟ್ ಅನ್ನು ಮುಚ್ಚುವುದು ಕಾಣಿಸಿಕೊಂಡಿದೆ. ಈ ಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಯಿತು.
“ಸಂಸತ್ತಿನಲ್ಲಿ ಬಿಜೆಪಿಗಾಗಿ ಮೋಯೆ ಮೋಯೆ” ಎಂಬ ಶೀರ್ಷಿಕೆಯೊಂದಿಗೆ @Amockx2022 ಬಳಕೆದಾರರು ಮೊದಲು ಈ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಅದು ಕ್ಷಿಪ್ರವಾಗಿ ಆನ್ಲೈನ್ ನಲ್ಲಿ ವೈರಲ್ ಆಯಿತು. ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಗಳು ಹಾಗೂ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಅವರು ಹಿನ್ನೆಲೆಯಲ್ಲಿ ಇರುವುದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ಗಮನ ಸೆಳೆಯುವಂತಾಯಿತು.
ಬೆಲೆ ಕುರಿತು ಊಹಾಪೋಹ:
ಈ ಘಟನೆಗೆ ಕೇಂದ್ರಬಿಂದುವಾಗಿದ್ದು ಠಾಕೂರ್ ಧರಿಸಿದ್ದ ಐಷಾರಾಮಿ ಲೂಯಿ ವಿಟಾನ್ ಬೆಲ್ಟ್. ಅದರಲ್ಲಿ ಕಾಣಿಸಿಕೊಂಡ ಐಕಾನಿಕ್ ಎಲ್ವಿ ಮೊನೋಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಜನರ ಗಮನ ಸೆಳೆದಿದೆ. ಅನೇಕರು ಇದರ ಬೆಲೆಯ ಬಗ್ಗೆ ಊಹಾಪೋಹ ವ್ಯಕ್ತಪಡಿಸಿದ್ದು, ನಿಖರ ಮಾದರಿ ದೃಢಪಟ್ಟಿಲ್ಲದಿದ್ದರೂ 80,000 ರೂ. ವಿನಿಂದ 1 ಲಕ್ಷ ರೂ.ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಲೂಯಿ ವಿಟಾನ್ ಬ್ರ್ಯಾಂಡ್ ವಿವಿಧ ಬಣ್ಣಗಳು ಮತ್ತು ವಿನ್ಯಾಸಗಳಲ್ಲಿ ಬೆಲ್ಟ್ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಸಾಮಾನ್ಯವಾಗಿ ಅವುಗಳ ಬೆಲೆ 40,000 ರೂ. ವಿನಿಂದ ಆರಂಭವಾಗಿ, ಕೆಲವು ವಿಶೇಷ ವಿನ್ಯಾಸಗಳಿಗೆ 1 ಲಕ್ಷ ರೂ.ಗಿಂತ ಹೆಚ್ಚು ಇರಬಹುದು ಎಂದು ಜನರು ಹೇಳಿದ್ದಾರೆ.
ಆದರೆ ವೈರಲ್ ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುವುದು ಎಲ್ವಿ ಲೋಗೋ ಮಾತ್ರವಾಗಿರುವುದರಿಂದ ನಿಖರ ಮಾದರಿಯನ್ನು ಗುರುತಿಸುವುದು ಕಷ್ಟಕರವಾಗಿದೆ. ಆ ಸಂದರ್ಭದಲ್ಲಿ ಅನುರಾಗ್ ಠಾಕೂರ್ ಅವರು ಚೆಕ್ಕರ್ಡ್ ಬ್ಲೇಝರ್, ಬಿಳಿ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಜೊತೆಗೆ ಈ ಬೆಲ್ಟ್ ಧರಿಸಿದ್ದಂತೆ ಕಾಣಿಸಿಕೊಂಡಿದ್ದಾರೆ.
Anurag Thakur who tells children of poor Hindus to leave education and come on the streets to save religion was seen wearing a INR 80,000 imported Louis Vuitton Belt in Lok Sabha.
— Roshan Rai (@RoshanKrRaii) February 3, 2026
He got scared and hid it when it accidentally got exposed on camera because just a few minutes ago… pic.twitter.com/yOGWQdQBaf
संसद में स्वदेशी पर भाषण चल रहा था और अनुराग ठाकुर का LV वाला बेल्ट दिख गया 🤭
— RAJSHEKHAR VERMA (@shekhar_br02) February 3, 2026
ज़्यादा नहीं 1-1.5 लाख के बीच का होगा 🤡 pic.twitter.com/rCEEjv8dV6







