ಬೌಧ್ ಡಿಸ್ಟಿಲರಿ ಮೇಲೆ ಐಟಿ ದಾಳಿ: 50 ಕೋಟಿ ರೂ. ವಶ
ಕರೆನ್ಸಿ ಎಣಿಕೆಯಿಂದ ‘ಸುಸ್ತಾಗಿʼಕೆಟ್ಟುಹೋದ ನೋಟು ಏಣಿಕೆ ಯಂತ್ರಗಳು

ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಕಂಪೆನಿ | Photo: facebook
ಭುವನೇಶ್ವರ: ಒಡಿಶಾ ಹಾಗೂ ಜಾರ್ಖಂಡ್ ನಲ್ಲಿರುವ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ 50 ಕೋಟಿ ರೂ.ಗೂ ಅಧಿಕ ಅಕ್ರಮ ನಗದು ಹಣ ಪತ್ತೆಯಾಗಿತ್ತು. ಆದರೆ ಇಷ್ಟೊಂದು ಅಗಾಧ ಪ್ರಮಾಣದ ನೋಟುಗಳನ್ನು ಏಣಿಸುವ ಭರದಲ್ಲಿ ನೋಟು ಏಣಿಕೆಯಂತ್ರವೇ ಕೆಟ್ಟುಹೋದ ಘಟನೆ ಇದೀಗ ಬೆಳಕಿಗೆ ಬಂದಿದೆ. ಆದಾಯ ತೆರಿಗೆ ಇಲಾಖೆಯು ಬೌಧ್ ಡಿಸ್ಟಿಲರಿ ಪ್ರೈ.ಲಿ. ಕಂಪೆನಿಗೆ ಸೇರಿದ ಬೊಲಾಂಗಿರ್, ಸಂಬಲ್ಪುರ, ರಾಂಚಿ ಹಾಗೂ ಲೋಹಾರ್ದರ್ಗದ ವಿವಿಧ ಸ್ಥಳಗಲ್ಲಿ ದಾಳಿ ನಡೆಸಿತ್ತು.
ದಾಳಿಯಲ್ಲಿ 50 ಕೋಟಿ ರೂ. ಗೂ ಅಧಿಕ ಮೊತ್ತದ ಕರೆನ್ಸಿ ನೋಟುಗಳು ಪತ್ತೆಯಾಗಿದ್ದವು. ಅವುಗಳ ಏಣಿಕೆ ಮಾಡಲು ನೋಟ್ ಕೌಂಟಿಂಗ್ ಯಂತ್ರಗಳನ್ನು ನಿಯೋಜಿಸಲಾಗಿತ್ತು.ಆದರೆ ದೊಡ್ಡ ಪ್ರಮಾಣದ ನೋಟುಗನ್ನು ಏಣಿಕೆ ಮಾಡುವುದು ನೋಟು ಏಣಿಕೆ ಯಂತ್ರಗಳಿಗೆ ‘ಪ್ರಯಾಸʼವಾಗಿ ಅವು ಹಠಾತ್ತನೆ ಸ್ಥಗಿತಗೊಂಡವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದಲ್ಲಿ ಮುಖ್ಯ ಕಾರ್ಯಾಲಯವನ್ನು ಹೊಂದಿರುವ ಬೌಧ್ ಡಿಸ್ಟಿಲರಿ ಉದ್ಯಮ ಸಂಸ್ಥೆಯ ಆರು ವೈವಿಧ್ಯಮಯ ಉದ್ಯಮಗಳನ್ನು ನಡೆಸುತ್ತಿದೆ.





