ಲಂಡನ್: ಸಚಿವ ಜೈಶಂಕರ್ ಮೇಲೆ ಹಲ್ಲೆ ಯತ್ನ
►ವಿದೇಶಾಂಗ ಸಚಿವರೆಡೆಗೆ ಧಾವಿಸಿ ಬಂದ ಖಾಲಿಸ್ತಾನ್ ಬೆಂಬಲಿಗ ►ತ್ರಿವರ್ಣಧ್ವಜ ಹರಿದು ಹಾಕಿ ಖಾಲಿಸ್ತಾನ್ ಪರ ಘೋಷಣೆ ಕೂಗಿದ ಗುಂಪು

ಎಸ್.ಜೈಶಂಕರ್ | PTI
ಹೊಸದಿಲ್ಲಿ: ಬ್ರಿಟನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ಬುಧವಾರ ಲಂಡನ್ಗೆ ಭೇಟಿ ಸಂದರ್ಭ ಭದ್ರತಾಲೋಪವಾಗಿದ್ದು, ಖಾಲಿಸ್ತಾನ್ವಾದಿಗಳ ಗುಂಪೊಂದು ಅವರ ಮೇಲೆ ದಾಳಿಗೆ ಯತ್ನಿಸಿದ ಘಟನೆ ನಡೆದಿದೆ.
ಚಾದಮ್ ಹೌಸ್ನಲ್ಲಿ ನಡೆದ ಚರ್ಚಾಗೋಷ್ಠಿಯೊಂದರಲ್ಲಿ ಭಾಗವಹಿಸಿದ ಬಳಿಕ ಜೈಶಂಕರ್ ಅವರು ಸ್ಥಳದಿಂದ ನಿರ್ಗಮಿಸುತ್ತಿದ್ದಾಗ ವ್ಯಕ್ತಿಯೊಬ್ಬ ಅವರಿದ್ದ ಕಾರಿನೆಡೆಗೆ ಓಡಿಬಂದು, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ತನ್ನ ಕೈಯಲ್ಲಿದ್ದ ಭಾರತದ ರಾಷ್ಟ್ರಧ್ವಜವನ್ನು ಹರಿದುಹಾಕಿದ್ದಾನೆ.
: Khalistani goons attempt to heckle India’s External Affairs Minister @DrSJaishankar in London while he was leaving in a car. A man can be seen trying to run towards him, tearing the Indian national flag in front of cops. Police seem helpless, as if ordered to not act. pic.twitter.com/zSYrqDgBRx
— THE SQUADRON (@THE_SQUADR0N) March 5, 2025
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇನ್ನೊಂದು ವೀಡಿಯೊದಲ್ಲಿ ಜೈಶಂಕರ್ ಮಾತುಕತೆ ನಡೆಸುತ್ತಿದ್ದ ಚಾದಮ್ ಹೌಸ್ನ ಹೊರಭಾಗದಲ್ಲಿ ಖಾಲಿಸ್ತಾನಿ ತೀವ್ರವಾದಿಗಳು ಪ್ರತಿಭಟನೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ವೀಡಿಯೊದಲ್ಲಿ ಪ್ರತಿಭಟನಕಾರರು ಧ್ವಜಗಳನ್ನು ಬೀಸುತ್ತಾ, ಖಾಲಿಸ್ತಾನಿ ಪರ ಘೋಷಣೆಗಳನ್ನು ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ.
ದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಮಾರ್ಚ್ 4ರಿಂದ 9ರವರೆಗೆ ಬ್ರಿಟನ್ಗೆ ಅಧಿಕೃತ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ.
ಇದಕ್ಕೂ ಮುನ್ನ ಜೈಶಂಕರ್ ಅವರು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮ್ಮಿ ಅವರ ಜೊತೆ ಚೆವೆನಿಂಗ್ ಹೌಸ್ನಲ್ಲಿ ಮಾತುಕತೆ ನಡೆಸಿದ್ದು, ದ್ವಿಪಕ್ಷೀಯ ಬಾಂಧವ್ಯಗಳ ಬಗ್ಗೆ ವಿಸ್ತೃಕವಾಗಿ ಚರ್ಚಿಸಿದರು. ಉಭಯದೇಶಗಳ ನಡುವೆ ಆಯಕಟ್ಟಿನ ಸಮನ್ವಯತೆ, ರಾಜಕೀಯ ಸಹಕಾರ, ವ್ಯಾಪಾರ ಮಾತುಕತೆ, ಶಿಕ್ಷಣ, ತಂತ್ರಜ್ಞಾನ, ಹಾಗೂ ಜನರ ನಡುವೆ ಸಂಪರ್ಕ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತೆಂದು ಮೂಲಗಳು ತಿಳಿಸಿವೆ.







