ಜಮ್ಮು-ಕಾಶ್ಮೀರ: ಹುತಾತ್ಮರ ದಿನ ಸಮಾಧಿಗೆ ಭೇಟಿ ನೀಡದಂತೆ ಕಾಶ್ಮೀರದ ರಾಜಕೀಯ ನಾಯಕರಿಗೆ ಗೃಹ ಬಂಧನ

PC : indiatoday.in
ಶ್ರೀನಗರ: ಈ ವಲಯದಲ್ಲಿ ‘ಹುತಾತ್ಮರ ದಿನ’ ಎಂದು ಸ್ಮರಿಸುವ 1931ರ ಹತ್ಯಾಕಾಂಡದ ವರ್ಷವಾದ ರವಿವಾರ ಹುತಾತ್ಮರ ಸಮಾಧಿಗಳ ಸಮೀಪ ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ಸೇರುವುದನ್ನು ತಡೆಯಲು ಜಮ್ಮು ಹಾಗೂ ಕಾಶ್ಮೀರ ಆಡಳಿತ ಶ್ರೀನಗರದಲ್ಲಿ ರವಿವಾರ ಭಾಗಶಃ ಲಾಕ್ ಡೌನ್ ಜಾರಿಗೊಳಿಸಿತ್ತು.
1931ರಲ್ಲಿ ಮಹಾರಾಜ ಹರಿ ಸಿಂಗ್ ನ ಪಡೆ ಗುಂಡಿಕ್ಕಿ ಹತ್ಯೆಗೈದ ಬಳಿಕ 22 ಕಾಶ್ಮೀರಿಗಳನ್ನು ದಫನ ಮಾಡಲಾದ ಖವಾಜಾ ಬಝಾರ್ ಗೆ ಕೇಂದ್ರ ಶಸಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಗಳೊಂದಿಗೆ ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಪ್ರವೇಶ ನಿರ್ಬಂಧಿಸಿದ್ದರು.
ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ಭಾರೀ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಯಾವುದೇ ಸಭೆ ಸೇರುವುದನ್ನು ತಡೆಯಲು ಶ್ರೀನಗರದಾದ್ಯಂತ ತಪಾಸಣಾ ಠಾಣೆ ಸ್ಥಾಪಿಸಲಾಗಿತ್ತು. ನಿರ್ಬಂಧ ವಿಧಿಸಲಾಗಿತ್ತು.
2019ರಲ್ಲಿ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಸಾರ್ವಜಕ ರಜಾದಿನವೆಂದು ಪರಿಗಣಿಸದ ಜುಲೈ 13 ಅನ್ನು ಕಾಶ್ಮೀರ ಹುತಾತ್ಮರ ದಿನವೆಂದು ಅಧಿಕೃತವಾಗಿ ಮರು ಸ್ಥಾಪಿಸುವಂತೆ ಆಗ್ರಹಿ ರಾಜಕೀಯ ಪಕ್ಷಗಳು ಮತ್ತೆ ಕರೆ ನೀಡಿರುವ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ.
ಹುತಾತ್ಮರಿಗೆ ಗೌರವ ಸಲ್ಲಿಸಲು ಸಮಾಧಿಗೆ ಭೇಟಿ ನೀಡಲು ಯೋಜಿಸಿದ್ದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ), ಪ್ರತಿಪಕ್ಷ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಹಾಗೂ ಜಮ್ಮು ಹಾಗೂ ಕಾಶ್ಮೀರ ಆಪ್ನಿ ಪಾರ್ಟಿ (ಜೆಕೆಎಪಿ) ಸೇರಿದಂತೆ ಕಾಶ್ಮೀರ ಮೂಲದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು.
ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಹಿನ್ನಲೆಯಲ್ಲಿ ಸಮಾಧಿಗೆ ಭೇಟಿ ನೀಡಲು ಅನುಮತಿ ನೀಡಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.







