ಜ್ಞಾನವಾಪಿ ಸಮೀಕ್ಷೆ : ವಾರಣಾಸಿ ಕೋರ್ಟ್ ಆದೇಶದ ವಿರುದ್ಧ ಅಲಹಾಬಾದ್ ಹೈಕೋರ್ಟ್ ಮೊರೆ ಹೋದ ಮಸೀದಿ ಸಮಿತಿ

ಹೊಸದಿಲ್ಲಿ: ಜ್ಞಾನವಾಪಿ ಮಸೀದಿಯನ್ನು ವೈಜ್ಞಾನಿಕ ಸಮೀಕ್ಷೆ ನಡೆಸಲು ವಾರಣಾಸಿ ನ್ಯಾಯಾಲಯವು ಭಾರತೀಯ ಪುರಾತತ್ವ ಇಲಾಖೆ( ಎಎಸ್ಐ) ಗೆ ನೀಡಿರುವ ಆದೇಶದ ವಿರುದ್ಧ ಮಸೀದಿ ಆಡಳಿತ ಸಮಿತಿಯು ಅಲಹಾಬಾದ್ ಹೈಕೋರ್ಟ್ ಗೆ ಮೊರೆ ಹೋಗಿದೆ ಎಂದು Live Law ವರದಿ ಮಾಡಿದೆ.
ಜ್ಞಾನವಾಪಿ ಮಸೀದಿಯ ಆವರಣವನ್ನು (ವುಝುಖಾನಾ ಹೊರತುಪಡಿಸಿ) ಎಎಸ್ ಐ ಸರ್ವೆ ನಡೆಸುವುದಕ್ಕೆ ಜುಲೈ 26ರ ತನಕ ಸೋಮವಾರ ತಡೆಯಾಜ್ಞೆ ನೀಡಿದ್ದ ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಲು ಸ್ವಾತಂತ್ರ್ಯ ನೀಡಿತ್ತು.
ಇಡೀ ಜ್ಞಾನವಾಪಿ ಮಸೀದಿಯ ಆವರಣವನ್ನು ಸಮೀಕ್ಷೆ ನಡೆಸಲು ಎಎಸ್ ಐಗೆ ಅನುಮತಿ ನೀಡಿರುವ ವಾರಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.
Next Story





