Punjab| ಪಂದ್ಯದ ವೇಳೆ ಕಬಡ್ಡಿ ಆಟಗಾರನ ಗುಂಡಿಕ್ಕಿ ಹತ್ಯೆ: ಸೆಲ್ಫಿ ತೆಗೆಯುವ ನೆಪದಲ್ಲಿ ಹಂತಕರಿಂದ ಕೃತ್ಯ

Photo|indiatoday
ಚಂಡೀಗಢ: ಪಂಜಾಬ್ನ ಮೊಹಾಲಿಯಲ್ಲಿ ಕಬಡ್ಡಿ ಆಟಗಾರನೋರ್ವನನ್ನು ಪಂದ್ಯಾಟದ ವೇಳೆಯೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ರಾಣಾ ಬಾಲಚೌರಿಯಾ ಹತ್ಯೆಯಾದ ಕಬಡ್ಡಿ ಆಟಗಾರ. ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಸೆಲ್ಫಿ ತೆಗೆಯುವ ನೆಪದಲ್ಲಿ ರಾಣಾ ಬಾಲಚೌರಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬಿಹಾ ಗ್ಯಾಂಗ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಮೃತ ಆಟಗಾರ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಂತಕರಿಗೆ ಆಶ್ರಯ ನೀಡಿದ್ದ ಎಂದು ಹೇಳಿಕೊಂಡಿದೆ.
ಸೆಲ್ಫಿ ತೆಗೆಯುವ ನೆಪದಲ್ಲಿ ಮೂವರು ದಾಳಿಕೋರರು ರಾಣಾ ಬಳಿ ಬಂದು ಗುಂಡಿಕ್ಕಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಣಾ ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





