Kerala| 6 ಬಾರಿ ಶಾಸಕನಾಗಿದ್ದರೂ ಸಚಿವನಾಗದ ಸತೀಶನ್ಗೆ ಒಲಿದ ಸಿಎಂ ಹುದ್ದೆ

ವಿ.ಡಿ.ಸತೀಶನ್ | Photo Credit : PTI
ತಿರುವನಂತಪುರ,ಮೇ 14: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ವಡಶ್ಸೇರಿ ದಾಮೋದರನ್ ಸತೀಶನ್, ಅವರು 2001ರಿಂದ ಸತತವಾಗಿ ಆರು ಬಾರಿ ಪರವೂರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದೂ ಅವರಿಗೆ ಸಚಿವ ಸ್ಥಾನ ಒಲಿದಿರಲಿಲ್ಲ. 62 ವರ್ಷದ ಸತೀಶನ್ ಅವರು 2021ರಿಂದ ಕೇರಳ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸಿದ್ದರು.
ಎಂಎಸ್ಡಬ್ಲ್ಯು ಎಲ್ಎಲ್ಎಂ ಪದವೀಧರರಾದ ಅವರು 1986ರಲಿ ಕೇರಳ ವಿದ್ಯಾರ್ಥಿ ಒ್ಕೂಟದ ಮೂಲಕ ರಾಜಕೀಯ ಬದುಕನ್ನು ಆರಂಭಿಸಿದ್ದರು.
ಮಹಾತ್ಮಾಗಾಂಧಿ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷನಾಗಿ ಹಾಗೂ ಎನ್ಎಸ್ಯುಐ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಸಿದ್ದರು. ಕೇರಳ ಹೈಕೋರ್ಟ್ನಲ್ಲಿ ನ್ಯಾಯವಾದಿಯಾಗಿಯೂ ಕೆಲಸ ಮಾಡಿದ್ದರು. ಕೆಪಿಸಿಸಿ ಉಪಾಧ್ಯಕ್ಷನಾಗಿ, ಎಐಸಿಸಿ ಸದಸ್ಯ ಹುದ್ದೆಗಳನ್ನು ಕೂಡಾ ನಿರ್ವಹಿಸಿದ್ದರು.
ಪರಿಸರವಾದಿ ಹಾಗೂ ಸುಸ್ಥಿರ ಬೆಳವಣಿಗೆಯ ಪ್ರಬಲ ಪ್ರತಿಪಾದಕರಾದ ಅವರು ಕಾರ್ಮಿಕ ಒಕ್ಕೂಟ ಚಳವಳಿಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದರು.
ಪ್ರಖರ ಭಾಷಣಕಾರನಾಗಿಯೂ ಜನಪ್ರಿಯರಾಗಿರುವ ಸತೀಶನ್ ಅವರು ಸಾಹಿತ್ಯ ಹಾಗೂ ಚಾರಣದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.




