ಮುಂಬೈ ವಿಮಾನ ನಿಲ್ದಾಣದ ರನ್ ವೇಯಿಂದ ಕೆಳಗೆ ಜಾರಿದ ಏರ್ ಇಂಡಿಯಾ ವಿಮಾನ; ಅಪಾಯದಿಂದ ಪಾರಾದ ಪ್ರಯಾಣಿಕರು

Photo credit: X/@nabilajamal_
ಮುಂಬೈ: ಸೋಮವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ, ಏರ್ ಇಂಡಿಯಾ ವಿಮಾನವೊಂದು ರನ್ ವೇಯಿಂದ ಕೆಳಗೆ ಜಾರಿರುವ ಘಟನೆ ನಡೆದಿದೆ.
ಮುಖ್ಯ ರನ್ ವೇ ಸಂಖ್ಯೆ 27ರಿಂದ ಜಾರಿದ ಎ320 ವಿಮಾನವು, ಕಲ್ಲು ಹಾಸದ ಪ್ರದೇಶಕ್ಕೆ ಜಾರಿ ನಂತರ ಟ್ಯಾಕ್ಸಿ ವೇಗೆ ಬಂದು ನಿಂತಿತು ಎಂದು ವರದಿಯಾಗಿದೆ. ವಿಮಾನಕ್ಕೆ ಕೊಂಚ ಮಟ್ಟಿಗೆ ಹಾನಿಯಾಗಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಮುಖ್ಯ ರನ್ ವೇಯನ್ನು ಮುಚ್ಚಲಾಗಿದೆ.
ಈ ರನ್ ವೇ ಅಪಘಾತದಲ್ಲಿ ವಿಮಾನದ ಮೂರು ಟೈರುಗಳು ಸ್ಫೋಟಗೊಂಡಿವೆ ಎಂದೂ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಮುಂಬೈ ವಿಮಾನ ನಿಲ್ದಾಣ ವಕ್ತಾರರು, “ವಿಮಾನ ನಿಲ್ದಾಣದ ಮುಖ್ಯ ರನ್ ವೇ 09/27ಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ವಿಮಾನ ಕಾರ್ಯಾಚರಣೆಗಳಲ್ಲಿ ಅಡಚಣೆ ಉಂಟಾಗದಿರಲು ಎರಡನೆ ರನ್ ವೇ 14/32 ಅನ್ನು ಸಕ್ರಿಯಗೊಳಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
Next Story





