ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಎಲುಬುಗಳು, ಮಾನವ ಕೂದಲಿನಿಂದ ತುಂಬಿದ 8 ಕಲಶ ಪತ್ತೆ!
ಆಸ್ಪತ್ರೆಯ ಮಾಜಿ ಟ್ರಸ್ಟಿಗಳ ವಿರುದ್ಧ ಮಾಟ ಮಂತ್ರದ ಆರೋಪ

Screengrab from X video/@fpjindia
ಮುಂಬೈ : ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಯಲ್ಲಿ 1,500 ಕೋಟಿ ರೂ. ಹಣವನ್ನು ಮಾಜಿ ಟ್ರಸ್ಟಿಗಳು ದುರುಪಯೋಗಪಡಿಸಿಕೊಂಡಿದ್ದಲ್ಲದೆ, ಆಸ್ಪತ್ರೆಯ ಆವರಣದಲ್ಲಿ ಹಾಲಿ ಟ್ರಸ್ಟಿಗಳ ವಿರುದ್ಧ ಮಾಟ ಮಂತ್ರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಲೀಲಾವತಿ ಆಸ್ಪತ್ರೆಯ ಟ್ರಸ್ಟ್ನ ಕಾರ್ಯನಿರ್ವಾಹಕ ನಿರ್ದೇಶಕ ಪರಂಬೀರ್ ಸಿಂಗ್ ಮಾತನಾಡಿ, ಆಸ್ಪತ್ರೆ ಆವರಣದಲ್ಲಿ ಹಾಲಿ ಟ್ರಸ್ಟಿಗಳ ವಿರುದ್ಧ ಮಾಜಿ ಟ್ರಸ್ಟಿಗಳು ಮಾಟ-ಮಂತ್ರ ಮಾಡಿದ್ದಾರೆ. ಆಸ್ಪತ್ರೆಯ ಟ್ರಸ್ಟಿಗಳು ಕುಳಿತುಕೊಳ್ಳುವ ಕಚೇರಿಯ ನೆಲದಡಿಯಲ್ಲಿ ಮೂಳೆಗಳು ಮತ್ತು ಮಾನವ ಕೂದಲಿನಿಂದ ತುಂಬಿದ 8 ಕಲಶಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಲೀಲಾವತಿ ಆಸ್ಪತ್ರೆಯ ಚಾರಿಟಬಲ್ ಟ್ರಸ್ಟ್ ನ ಮಾಜಿ ಟ್ರಸ್ಟಿಗಳು ಮತ್ತು ಇತರ ಸಂಬಂಧಿತ ವ್ಯಕ್ತಿಗಳು 1,500 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಲೀಲಾವತಿ ಕೀರ್ತಿಲಾಲ್ ಮೆಹ್ತಾ ಮೆಡಿಕಲ್ ಟ್ರಸ್ಟ್ ಜಾರಿ ನಿರ್ದೇಶನಾಲಯ(ಈಡಿ) ಮತ್ತು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದೆ.





