LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

ಹೊಸದಿಲ್ಲಿ: ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ತೆಲಂಗಾಣ ಹೊರತುಪಡಿಸಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿಯ ಕಮಲ ಅರಳಿದೆ. ತೆಲಂಗಾಣದಲ್ಲಿ ಕೆಸಿಆರ್ ಅವರ ಬಿಆರ್‌ಸಿ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿದೆ. ಆ ಮೂಲಕ ತೆಲಂಗಾಣದ ಇತಿಹಾಸದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದೆ. ಕೆಸಿಆರ್ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ವಾರ್ತಾಭಾರತಿ ಲೈವ್ ಅಪ್‌ಡೇಟ್ ನಿರೀಕ್ಷಿಸಿ....
Live Updates
- 3 Dec 2023 11:59 AM IST
ತೆಲಂಗಾಣ ಸಿಎಂ ಕೆಸಿಆರ್‌ಗೆ ಕಮರೆಡ್ಡಿಯಲ್ಲಿ ಭಾರೀ ಹಿನ್ನಡೆ. ಕಾಂಗ್ರೆಸ್ ನ ರೇವಂತ್ ರೆಡ್ಡಿಗೆ ಮುನ್ನಡೆ. ಮೂರನೇ ಸ್ಥಾನಕ್ಕೆ ಸರಿದ ಕೆ ಚಂದ್ರಶೇಖರ್ ರಾವ್.
- 3 Dec 2023 11:51 AM IST
ರಾಜಸ್ಥಾನ : ಶಿಯೋ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ರವೀಂದ್ರ ಸಿಂಗ್ ಭಾಟಿ ಮುನ್ನಡೆ
- 3 Dec 2023 11:39 AM IST
ತೆಲಂಗಾಣ : ರಾಜ್ಯದ ಮೊದಲ ಗೆಲುವು ಸಾಧಿಸಿದ ಕಾಂಗ್ರೆಸ್. ಆಶ್ವರಪೇಟಾ ಕ್ಷೇತ್ರ ಕಾಂಗ್ರೆಸ್ ಪಾಲು. ಆದಿನಾರಾಯಣ ಅವರಿಗೆ 28,000 ಮತಗಳ ಗೆಲುವು
- 3 Dec 2023 11:38 AM IST
ಮಧ್ಯಪ್ರದೇಶ : ಕಮಲ್ ನಾಥ್ ಗೆ ಮುನ್ನಡೆ
Next Story





