ಮಹಿಳಾ ಮೀಸಲಾತಿ ಮಸೂದೆಗೆ ಸೋಲು | ಉಳಿದೆರಡು ವಿಧೇಯಕವನ್ನು ಮತಕ್ಕೆ ಹಾಕದಿರಲು ನಿರ್ಧರಿಸಿದ ಸರಕಾರ

Photo Credit : PTI
ಹೊಸದಿಲ್ಲಿ: ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು ಹಿನ್ನೆಲೆಯಲ್ಲಿ ಉಳಿದೆರಡು ವಿಧೇಯಕವನ್ನು ಮತಕ್ಕೆ ಹಾಕದಿರಲು ಸರಕಾರ ನಿರ್ಧರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು, ವಿರೋಧ ಪಕ್ಷವು ಇಂತಹ ಐತಿಹಾಸಿಕ ಮಸೂದೆಯನ್ನು ಬೆಂಬಲಿಸದ ಕಾರಣ ಮಸೂದೆ ವಿಫಲವಾಯಿತು ಎಂದು ಹೇಳಿದ್ದಾರೆ. ಇತರ ಎರಡು ಮಸೂದೆಗಳನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಗೆ ಸೋಲಿನ ಹಿನ್ನೆಲೆ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆಯನ್ನು ಮುಂದುವರಿಸದಿರಲು ಸರಕಾರ ನಿರ್ಧರಿಸಿದೆ.
Next Story




