ಲೋಕಸಭೆ | ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ʼಜೈ ಫೆಲೆಸ್ತೀನ್ʼ ಎಂದ ಅಸದುದ್ದೀನ್ ಉವೈಸಿ

ಅಸದುದ್ದೀನ್ ಉವೈಸಿ | Photo : screengrab of Sansad tv
ಹೊಸದಿಲ್ಲಿ : 18ನೇ ಲೋಕಸಭೆಯ ಸಂಸದರ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿದ್ದು, ತೆಲಂಗಾಣದ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಪ್ರಮಾಣ ವಚನ ಸ್ವೀಕಾರದ ವೇಳೆ ಜೈ ಫೆಲೆಸ್ತೀನ್ ಎಂದು ಹೇಳಿ ಗಮನ ಸೆಳೆದರು.
ಪ್ರಮಾಣವಚನ ಸ್ವೀಕರಿಸಲು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಮುಖ್ಯಸ್ಥರೂ ಆಗಿರುವ ಅಸದುದ್ದೀನ್ ಉವೈಸಿ ಅವರನ್ನು ಕರೆದ ವೇಳೆ ಬಿಜೆಪಿ ಸದಸ್ಯರು ಭಾರತ್ ಮಾತಾ ಕೀ ಜೈ, ಜೈ ಶ್ರೀರಾಂ ಘೋಷಣೆ ಕೂಗಿದರು. ವೇದಿಕೆಯೇರಿದ ಉವೈಸಿಯವರು ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಅವರು, ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಫೆಲೆಸ್ತೀನ್, ತಕ್ಬೀರ್ ಅಲ್ಲಾಹು ಅಕ್ಬರ್ ಎಂದು ನಿರ್ಗಮಿಸಿದರು.
Next Story







