Budget Session| ಲೋಕಸಭೆಯಲ್ಲಿ ಗದ್ದಲ: ವಿಪಕ್ಷಗಳ 8 ಸಂಸದರನ್ನು ಅಮಾನತುಗೊಳಿಸಿದ ಸ್ಪೀಕರ್

ಹೊಸದಿಲ್ಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯ ಸ್ಪೀಕರ್ ಪೀಠದ ಕಡೆಗೆ ಕಾಗದಗಳನ್ನು ಎಸೆದು ಗದ್ದಲವನ್ನು ಸೃಷ್ಟಿಸಿದ ವಿಪಕ್ಷಗಳ 8 ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನದ ಮುಂದಿನ ಅವಧಿಗೆ ಅಮಾನತು ಮಾಡಿ ಆದೇಶಿಸಿದ್ದಾರೆ.
ಲೋಕಸಭೆಯಲ್ಲಿನ ಗದ್ದಲ ಮತ್ತು ಪೀಠದ ಕಡೆಗೆ ಕಾಗದಗಳನ್ನು ಎಸೆದ ಘಟನೆಗೆ ಸಂಬಂಧಿಸಿದಂತೆ, ಸಂಸದ ಹಿಬಿ ಈಡನ್, ಅಮರಿಂದರ್ ಸಿಂಗ್, ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಕಿರಣ್ ಕುಮಾರ್ ರೆಡ್ಡಿ, ಎಸ್ ವೆಂಕಟೇಶ್ ಸೇರಿದಂತೆ 8 ವಿರೋಧ ಪಕ್ಷದ ಸಂಸದರನ್ನು ಈ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.
ಪೀಠದ ಎದುರು ಕಾಗದಗಳನ್ನು ಎಸೆದ ವಿರೋಧ ಪಕ್ಷದ ಸಂಸದರ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಿರ್ಣಯ ಮಂಡಿಸಿದ್ದರು.
Next Story





