LPG ಇಂಧನ ಪೂರೈಕೆಯಲ್ಲಿ ವ್ಯತ್ಯಯ | ಮುಂಬೈನ ಶೇ.20 ರಷ್ಟು ಹೋಟೆಲ್ಗಳು , ರೆಸ್ಟೋರೆಂಟ್ಗಳು ಬಂದ್

ಸಾಂದರ್ಭಿಕ ಚಿತ್ರ (PTI)
ಮುಂಬೈ : ವಾಣಿಜ್ಯ ಎಲ್ಪಿಜಿ ಪೂರೈಕೆಯಲ್ಲಿನ ಅಡಚಣೆಗಳಿಂದಾಗಿ ಮುಂಬೈನಲ್ಲಿ ಸುಮಾರು 20% ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಮುಚ್ಚಲ್ಪಟ್ಟಿವೆ ಎಂದು ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ʼAHARʼ ತಿಳಿಸಿದೆ.
ಅನಿಲ ಪೂರೈಕೆ ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಎರಡು ದಿನಗಳಲ್ಲಿ ನಗರದ 50% ಹೋಟೆಲ್ಗಳು ಮುಚ್ಚಲ್ಪಡಬಹುದು ಎಂದು ಸಂಘವು ಎಚ್ಚರಿಸಿದೆ.
AHAR ಪ್ರಕಾರ, ಹೋಟೆಲ್ಗಳ ಕಾರ್ಯಚರಣೆಯು ಪ್ರಸ್ತುತ ಲಭ್ಯವಿರುವ ಎಲ್ಪಿಜಿ ಸಂಗ್ರಹದ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಮುಂಬೈನ ಅರ್ಧದಷ್ಟು ಹೋಟೆಲ್ಗಳು ಮುಚ್ಚಲ್ಪಡಬಹುದು ಎಂದು ಸಂಘವು ಹೇಳಿದೆ.
ಆದರೆ, ಹೋಟೆಲ್ಗಳನ್ನು ಸಾಮೂಹಿಕವಾಗಿ ಮುಚ್ಚುವ ಬಗ್ಗೆ ಸಂಘವು ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು AHAR ಸ್ಪಷ್ಟಪಡಿಸಿದೆ.
Next Story





