ಮಧ್ಯಪ್ರದೇಶ | ದುರ್ಗಾ ವಿಗ್ರಹ ಸಾಗಿಸುತ್ತಿದ್ದ ಟ್ರ್ಯಾಕ್ಟರ್–ಟ್ರಾಲಿ ಉರುಳಿ, ಕನಿಷ್ಠ 10 ಮಂದಿ ಮೃತ್ಯು

Credit : indiatoday.in
ಖಾಂಡ್ವಾ (ಮಧ್ಯಪ್ರದೇಶ): ದುರ್ಗ ಪೂಜೆಯ ಬಳಿಕ ವಿಗ್ರಹವನ್ನು ವಿಸರ್ಜಿಸಲು ತೆರಳಿದ್ದ ಟ್ರ್ಯಾಕ್ಟರ್–ಟ್ರಾಲಿ ಉರುಳಿ, ಕನಿಷ್ಠ 10 ಮಂದಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಪಂಧಾನ ಪ್ರದೇಶದಲ್ಲಿ ಗುರುವಾರ ನಡೆದಿದೆ ಎಂದು India Today ವರದಿ ಮಾಡಿದೆ.
ಮೃತರಲ್ಲಿ ಹೆಚ್ಚಿನವರು ಯುವತಿಯರೆಂದು ಅಧಿಕೃತ ಮೂಲಗಳು ದೃಢಪಡಿಸಿವೆ.
ಅರ್ದ್ಲಾ ಮತ್ತು ಜಮ್ಲಿ ಗ್ರಾಮಗಳಿಂದ ಸುಮಾರು 20–25 ಮಂದಿ ಭಕ್ತರು ದುರ್ಗಾ ವಿಗ್ರಹವನ್ನು ವಿಸರ್ಜನೆಗಾಗಿ ಕೊಂಡೊಯ್ಯುತ್ತಿದ್ದರು. ಕೊಳದ ಹತ್ತಿರ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ ಸಮತೋಲನ ತಪ್ಪಿ ಟ್ರಾಲಿಯೊಂದಿಗೆ ನೀರಿಗೆ ಉರುಳಿದ ಪರಿಣಾಮ ಭಕ್ತರು ನೀರಿಗೆ ಬಿದ್ದು ದುರಂತ ಸಂಭವಿಸಿದೆ.
ಅಪಘಾತದ ನಂತರ ಸ್ಥಳೀಯ ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಹಲವರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಆದರೆ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.





