ಮಂಗಳೂರಿನ ಡಾ. ಹಾರೂನ್ ಹುಸೇನ್ ಅವರಿಗೆ ಪ್ರತಿಷ್ಠಿತ FICP ಫೆಲೋಶಿಪ್

ಡಾ. ಹಾರೂನ್ ಎಚ್
ಪಾಟ್ನಾ: ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ಹಾರೂನ್ ಎಚ್. ಅವರಿಗೆ ಭಾರತೀಯ ವೈದ್ಯರ ಸಂಘ ನೀಡುವ ಅತ್ಯುನ್ನತ ಶೈಕ್ಷಣಿಕ ಗೌರವಗಳಲ್ಲಿ ಒಂದಾದ FICP (Fellowship of the Indian College of Physicians ) ಫೆಲೋಶಿಪ್ ದೊರೆತಿದೆ.
ಸಾಮ್ರಾಟ್ ಅಶೋಕ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಎಪಿಐನ 81ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ APICON-26 ರಲ್ಲಿ ಫೆಲೋಶಿಪ್ ಅನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು.
ಫೆಲೋಶಿಪ್ ಸ್ವೀಕರಿಸುವುದರ ಜೊತೆಗೆ, ಡಾ.ಹಾರೂನ್ ಅವರು APICON-26ರಲ್ಲಿ ಕರ್ನಾಟಕದಿಂದ ಉಪನ್ಯಾಸಕರಾಗಿಯೂ ಪ್ರತಿನಿಧಿಸಿದರು. ಅವರು ““Geriatric Giants in Indian Practice: Identifying and Managing Frailty, Falls, and Functional Decline” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ವಯೋಸಂಬಂಧಿತ ಆರೋಗ್ಯ ಸಮಸ್ಯೆಗಳ ನಿರ್ವಹಣೆ, ವೃದ್ಧರ ಆರೋಗ್ಯ ಸವಾಲುಗಳು, ಅವರ ಆರೈಕೆ ವ್ಯವಸ್ಥೆಗಳ ಬಗ್ಗೆ ಡಾ. ಹಾರೂನ್ ಅವರ ಉಪನ್ಯಾಸಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಡಾ. ಹಾರೂನ್ ಅವರು ಅವರು "Geriatric Giants in Indian Practice" ಎಂಬ ಶೀರ್ಷಿಕೆಯ ಅಧ್ಯಾಯವನ್ನು Progress in Medicine 2026 (ಸಂಪುಟ 36) ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ಸಮ್ಮೇಳನದ ಬಳಿಕ ಮಾತನಾಡಿದ ಡಾ. ಹಾರೂನ್, ಭಾರತ ವೃದ್ಧರ ಜನಸಂಖ್ಯೆಯಲ್ಲಿ ತ್ವರಿತ ಹೆಚ್ಚಳವನ್ನು ಕಾಣುತ್ತಿದೆ, ಆರೋಗ್ಯಕರ ವೃದ್ಧಾಪ್ಯವನ್ನು ರಾಷ್ಟ್ರೀಯ ಆದ್ಯತೆಯನ್ನಾಗಿ ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದರು. ವೃದ್ಧಾಪ್ಯದ ಆರೈಕೆಯನ್ನು ಸುಧಾರಿಸಲು ಅವರು ಹಲವಾರು ಪ್ರಮುಖ ಕ್ರಮಗಳನ್ನು ವಿವರಿಸಿದರು.
ನ್ಯುಮೋನಿಯಾ ಮತ್ತು ಇತರ ತಡೆಗಟ್ಟಬಹುದಾದ ಕಾಯಿಲೆಗಳ ವಿರುದ್ಧ ವಿಶೇಷವಾಗಿ ಹಿರಿಯ ನಾಗರಿಕರಿಗೆ ಲಸಿಕೆಗಳನ್ನು ನೀಡುವ ಬಗ್ಗೆ ಡಾ.ಹಾರೂನ್ ಮಾತನಾಡಿದರು.
ಡಾ. ಹಾರೂನ್ ಅವರು ನಿಯಮಿತ ಆರೋಗ್ಯ ತಪಾಸಣೆಯ ಮಹತ್ವವನ್ನೂ ಒತ್ತಿ ಹೇಳಿ, ಮಧುಮೇಹ ಹಾಗೂ ರಕ್ತದೊತ್ತಡದಂತಹ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದರಿಂದ ದೀರ್ಘಕಾಲೀನ ಸಮಸ್ಯೆ ತಡೆಯಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಡಾ. ಹರೂನ್ ಎಚ್. ಹಸನ್ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ತಜ್ಞ ವೈದ್ಯರಾಗಿದ್ದಾರೆ. ಜೆರಿಯಾಟ್ರಿಕ್ ಮೆಡಿಸಿನ್ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಬೋಧನೆ, ಸಂಶೋಧನೆ ಮತ್ತು ಪುರಾವೆ ಆಧಾರಿತ ವೈದ್ಯಕೀಯ ಆರೈಕೆಯನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ವೈದ್ಯಕೀಯ ಅಭ್ಯಾಸ, ಶೈಕ್ಷಣಿಕ ಕ್ಷೇತ್ರ ಮತ್ತು ವೃತ್ತಿಪರ ನಾಯಕತ್ವಕ್ಕೆ ನೀಡಿರುವ ಅವರ ನಿರಂತರ ಕೊಡುಗೆಗೆ ಇದೀಗ ಇಂಡಿಯನ್ ಕಾಲೇಜ್ ಆಫ್ ಫಿಸಿಶಿಯನ್ಸ್ ನ ಫೆಲೋ ಆಗಿ ಅವರಿಗೆ ವಿಶೇಷ ಗೌರವ ಸಿಕ್ಕಿದೆ.







