118 ಕೋಟಿ ರೂಪಾಯಿಗೆ ಮಾರಾಟವಾದ ಎಂ.ಎಫ್.ಹುಸೇನ್ ಅವರ 'ಗ್ರಾಮಯಾತ್ರೆ' ಚಿತ್ರ

ಎಂ.ಎಫ್.ಹುಸೇನ್ PC: x.com/ttindia
ಮುಂಬೈ: ಖ್ಯಾತ ಚಿತ್ರ ಕಲಾವಿದ ಎಂ.ಎಫ್.ಹುಸೇನ್ ಅವರ 'ಗ್ರಾಮಯಾತ್ರೆ' ಚಿತ್ರ 118 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ವಿಶ್ವದ ಚಿತ್ರಕಲಾ ಕ್ಷೇತ್ರದಲ್ಲಿ ದಾಖಲೆ ಸ್ಥಾಪಿಸಿದೆ. ಕ್ರಿಸ್ಟೀಯಲ್ಲಿ ನಡೆದ ಹರಾಜಿನಲ್ಲಿ ಈ ಚಿತ್ರ 25 ರಿಂದ 35 ಲಕ್ಷ ಡಾಲರ್ ಗೆ ಮಾರಾಟವಾಗುವ ನಿರೀಕ್ಷೆ ನಮ್ಮದಾಗಿತ್ತು. ಆದರೆ ಇದು ಅದ್ಭುತ ಚಿತ್ರ ಎಂದು ಸೌತ್ ಏಷ್ಯನ್ ಮಾಡನ್ ಅಂಡ್ ಕಾಂಟೆಂಪರರಿ ಆರ್ಟ್ ಮುಖ್ಯಸ್ಥ ನಿಶಾದ್ ಅವಾರಿ ಹೇಳಿದ್ದಾರೆ.
ಇದೀಗ ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿರುವ ಹುಸೇನ್ ಅವರ 'ಝಮೀನ್' ಜತೆಗೆ ಮಾತ್ರ ಇದನ್ನು ಹೋಲಿಸಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.
ಭಾರತದ ಬರಿಗಾಲ ಪಿಕಾಸೊ ಎನಿಸಿಕೊಂಡಿರುವ ಹುಸೇನ್, ಹೋರ್ಡಿಂಗ್ ಪೈಂಟರ್ ಆಗಿ ತಮ್ಮ ವೃತ್ತಿ ಅರಂಭಿಸಿದವರು. ಅವರು ರಚಿಸಿದ ಬಾಲಿವುಡ್ ಪೋಸ್ಟರ್ ಗಳಂತೆ ಅವರ ಜೀವನಕಥೆಯೂ ಚಿತ್ರಯೋಗ್ಯ. ಅದರೆ ಅವರ ಬದುಕು ಸುಖಾಂತ್ಯದ ಚಿತ್ರವಾಗಿರದೇ, ಹಲವು ಬಾರಿ ಜೀವ ಬೆದರಿಕೆ ಕರೆಗಳನ್ನು ಪಡೆದಿದ್ದ ಅವರ ವಿರುದ್ಧ ಹಲವು ದಾವೆಗಳು ಸಲ್ಲಿಕೆಯಾಗಿ ಗಡೀಪಾರಾದರು. "ಇದು ಹುಸೇನ್ ಅವರಿಗೆ ಮತ್ತೆ ತಾಯ್ನಾಡಿಗೆ ಬಂದಂತೆ" ಎಂದು ಚಿತ್ರಕಲಾ ಇತಿಹಾಸ ತಜ್ಞೆ ಮತ್ತು ಮಾರ್ಗದರ್ಶಕ ಯಶೋಧರ ದಾಲ್ಮಿಯಾ ಹೇಳುತ್ತಾರೆ.
ಪ್ರಗತಿಪರ ಕಲಾಕಾರರ ಗುಂಪಿನ ಸಂಸ್ಥಾಪಕ ಸದಸ್ಯರಾಗಿ, ಸ್ವಾತಂತ್ರ್ಯೋತ್ತರ ಭಾರತದ ಕಲೆಗೆ ಹೊಸ ಆಯಾಮ ಒದಗಿಸಿದರು. "ಗ್ರಾಮಯಾತ್ರೆ ನವನವೀನ ಕಥಾನಕ ಮತ್ತು ಪ್ರಭಾವವನ್ನು ಪ್ರದರ್ಶಿಸಿದರೂ, ಇದು ಭಾರತದ ಬೇರು ಹೊಂದಿದೆ. ಅವರು ಸಮಾನ್ಯ ಭಾರತೀಯನನ್ನು ಚಿತ್ರದಲ್ಲಿ ಬಿಂಬಿಸಿದ್ದಾರೆ. ರೈತ ಹೊಲ ಉಳುವುದನ್ನು, ಗೋಧಿಯನ್ನು ಪುಡಿ ಮಾಡಲು ಬೀಸುಗಲ್ಲು ಬಳಸುವುದನ್ನು ಮತ್ತು ಜೋಡಿಯೊಂದು ವಿಹರಿಸುತ್ತಿರುವುದನ್ನು ಬಿಂಬಿಸಿದೆ"
PC: x.com/hvgoenka







