ಬಿಹಾರ | ಜೆಡಿಯು ತೊರೆದ ಮಾಜಿ ಸಂಸದ ಸಂತೋಷ್ ಕುಶ್ವಾಹ : ಆರ್ಜೆಡಿ ಸೇರ್ಪಡೆಗೆ ಸಿದ್ಧತೆ

Photo Credit : X/ @yadavtejashwi
ಹೊಸದಿಲ್ಲಿ,ಅ.10: ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಭಾರೀ ಹಿನ್ನಡೆಯುಂಟಾಗಿದ್ದು, ಅದರ ನಾಯಕ ಹಾಗೂ ಬಿಹಾರದ ಪೂರ್ನಿಯಾ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಸಂತೋಷ್ ಕುಶ್ವಾಹ ಅವರು ಪ್ರತಿಪಕ್ಷ ಆರ್ಜೆಡಿಗೆ ಸೇರ್ಪಡೆಗೊಳ್ಳಲು ಸನ್ನದ್ಧರಾಗಿದ್ದಾರೆ.
ಕುಶ್ವಾಹ ಅವರು ಜೆಡಿಯು ಸಂಸದರಾಗಿ ಪೂರ್ನಿಯಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. ಬಂಕಾ ಲೋಕಸಭಾ ಕ್ಷೇತ್ರದ ಹಾಲಿ ಜೆಡಿಯು ಸಂಸದ ಗಿರಿಧಾರಿ ಯಾದವ್ ಹಾಗೂ ಜನಾಮಾಬಾದ್ನ ಎಂಪಿ ಜಗದೀಶ್ ಶರ್ಮಾ ಅವರ ಪುತ್ರ, ಮಾಜಿ ಶಾಸಕ ರಾಹುಲ್ ಶರ್ಮಾ ಕೂಡಾ ಆರ್ಜೆಡಿ ಸೇರ್ಪಡೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೂರ್ನಿಯಾ ಪ್ರಾಂತದಲ್ಲಿ ಜೆಡಿಯು ಪಕ್ಷದ ಪ್ರಮುಖ ನಾಯಕರಾದ ಕುಶ್ವಾಹ ಅವರ ಪಕ್ಷಾಂತರದಿಂದ ಆಡಳಿತ ಪಕ್ಷಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದರಿಂದ ಈ ಪ್ರಾಂತದಲ್ಲಿ ಜೆಡಿಯುನ ಮತಗಳಿಗೆ ಪ್ರಮಾಣ ಕುಸಿಯಲಿದೆಯೆಂದು ಚುನಾವಣಾ ವಿಶ್ಲೇಷಕರು ತಿಳಿಸಿದ್ದಾರೆ.





