ಮುಂಬೈ: ಬೈಕ್ ಮೇಲೆ ಹರಿದ ಲಾರಿ; ಯುವ ಕಿರುತೆರೆ ನಟ ಅಮನ್ ಜೈಸ್ವಾಲ್ ಮೃತ್ಯು

PC: instagram.com/aman__jazz
ಮುಂಬೈ: ಶುಕ್ರವಾರ ಸಂಜೆ ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ಲಾರಿಯೊಂದು ಮೋಟರ್ ಸೈಕಲ್ ಮೇಲೆ ಹರಿದು ಸಂಭವಿಸಿದ ಅಪಘಾತದಲ್ಲಿ ಯುವ ಕಿರುತೆರೆ ನಟ ಅಮನ್ ಜೈಸ್ವಾಲ್ (23) ಮೃತಪಟ್ಟಿದ್ದಾರೆ.
ಅವರು "ಧರ್ತಿಪುತ್ರ ನಂದಿನಿ" ಹೆಸರಿನ ಟಿವಿ ಧಾರಾವಾಹಿಯ ನಾಯಕ ನಟನಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜೈಸ್ವಾಲ್ ಅವರನ್ನು ಕಾಮಾ ಆಸ್ಪತ್ರೆಗೆ ತಕ್ಷಣ ಸಾಗಿಸಲಾಯಿತು. ಆದರೆ ಅವರು ಅಲ್ಲಿ ಮೃತಪಟ್ಟರು ಎಂದು ಅಂಬೋಲಿ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.
ಟ್ರಕ್ ಚಾಲಕನ ವಿರುದ್ಧ ರಭಸದ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ.
Next Story





