ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ರ್ಯಾಲಿ: ರಾಕೇಶ್ ಟಿಕಾಯತ್ ಭಾಗವಹಿಸಿದ್ದಕ್ಕೆ 'ಗದ್ದಲ'
ತುರ್ತು ಪಂಚಾಯತ್ಗೆ ಕರೆ ನೀಡಿದ ಭಾರತೀಯ ಕಿಸಾನ್ ಯೂನಿಯನ್

ರಾಕೇಶ್ ಟಿಕಾಯತ್ | Image Credit: The New Indian Express
ಮುಝಫರ್ನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಭಾಗವಹಿಸುವಿಕೆಯನ್ನು ಜನರು ವಿರೋಧಿಸಿದ ನಂತರ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಶನಿವಾರ ಮುಜಫರ್ನಗರದಲ್ಲಿ ತುರ್ತು 'ಕಿಸಾನ್ ಪಂಚಾಯತ್'ಗೆ ಕರೆ ನೀಡಿದೆ.
ಘಟನೆಯ ಕುರಿತು ಚರ್ಚಿಸಲು ಮುಜಫರ್ನಗರದ ಜಿಐಸಿ ಮೈದಾನದಲ್ಲಿ ಪಂಚಾಯತ್ ನಡೆಸಲಾಗುವುದು ಎಂದು ಬಿಕೆಯು ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಘೋಷಿಸಿದರು.
'ಆಕ್ರೋಶ್ ರ್ಯಾಲಿ'ಯಲ್ಲಿ ನಡೆದ ಘಟನೆಯು ರೈತರ ಚಳುವಳಿಯನ್ನು ದುರ್ಬಲಗೊಳಿಸಲು ರಾಜಕೀಯ ಪಕ್ಷವು ಆಯೋಜಿಸಿದ್ದ ಪಿತೂರಿಯ ಭಾಗವಾಗಿದೆ ಎಂದು ನರೇಶ್ ಟಿಕಾಯತ್ ಹೇಳಿದರು.
ಶುಕ್ರವಾರ, ಪಹಲ್ಗಾಮ್ ದಾಳಿಯನ್ನು ಪ್ರತಿಭಟಿಸಲು ಆಯೋಜಿಸಿದ್ದ ರ್ಯಾಲಿಯಲ್ಲಿ ಬಲಪಂಥೀಯ ಗುಂಪುಗಳು ರಾಕೇಶ್ ಟಿಕಾಯತ್ ಅವರ ಭಾಗವಹಿಸುವಿಕೆಗೆ ಗದ್ದಲದವೆಬ್ಬಿಸಿತು. ನರೇಶ್ ಟಿಕಾಯತ್ ವಾಪಸ್ ಹೋಗಿ ಎಂದು ಆಗ್ರಹಿಸಿದರು. ಆಗ ಉಂಟಾದ ಗದ್ದಲದಲ್ಲಿ, ಅವರ ಪೇಟ ಕೂಡ ಬಿದ್ದಿತು. ಘಟನೆಯ ವೀಡಿಯೊಗಳು ಇದನ್ನು ತೋರಿಸಿವೆ.
"ಈ ಘಟನೆ ಸ್ವಯಂಪ್ರೇರಿತವಾಗಿರಲಿಲ್ಲ. ಇದು ಪೂರ್ವ ಯೋಜಿತ ಮತ್ತು ರಾಜಕೀಯ ಉದ್ದೇಶಗಳಿಂದ ನಡೆಸಲ್ಪಟ್ಟಿದೆ" ಎಂದು ನರೇಶ್ ನರೇಶ್ ಟಿಕಾಯತ್ ಹೇಳಿದರು. ಮಧ್ಯಾಹ್ನ ಪ್ರಾರಂಭವಾಗಲಿರುವ ಪಂಚಾಯತ್ಗೆ ಮುಂಚಿತವಾಗಿ ಪ್ರದೇಶದಲ್ಲಿರುವ ರೈತರು ಸಿಸೌಲಿ ಮತ್ತು ಮುಜಫರ್ನಗರದಲ್ಲಿ ಸೇರಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.
ಶುಕ್ರವಾರದ ನಡೆದ ಗದ್ದಲವು ರೈತರ ಧ್ವನಿಯನ್ನು ನಿಗ್ರಹಿಸಲು ಒಂದು ನಿರ್ದಿಷ್ಟ ರಾಜಕೀಯ ಪಕ್ಷದಿಂದ ನಡೆಸಲ್ಪಟ್ಟ ಪಿತೂರಿಯಾಗಿದೆ. ಕೆಲವು ಯುವಕರನ್ನು ಉದ್ದೇಶಪೂರ್ವಕವಾಗಿ ರ್ಯಾಲಿಯನ್ನು ಅಡ್ಡಿಪಡಿಸಲು ಕಳುಹಿಸಲಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕಾಶ್ಮೀರ ಕಣಿವೆಯ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು, ಸಾವನ್ನಪ್ಪಿದ್ದನ್ನು ವಿರೋಧಿಸಿ ಬಿಕೆಯು ಟ್ರ್ಯಾಕ್ಟರ್ ಮೆರವಣಿಗೆಯನ್ನು ಆಯೋಜಿಸಲಿದೆ ಎಂದು ಟಿಟಾಯತ್ ಘೋಷಿಸಿದರು.
ಮೆರವಣಿಗೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.







