‘ರಾಷ್ಟ್ರವೇ ಸರ್ವೋಚ್ಚ’: INDIA ಒಕ್ಕೂಟದ ರ್ಯಾಲಿಗೆ CJP ಬೆಂಬಲ
ನ. 1ರಂದು ರಾಮಲೀಲಾ ಮೈದಾನದಲ್ಲಿ ಸಮಾವೇಶ

Photo Credit : PTI
ಹೊಸದಿಲ್ಲಿ: ‘ರಾಷ್ಟ್ರವೇ ಸರ್ವೋಚ್ಚ’ ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 1ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ INDIA ಒಕ್ಕೂಟದ ರ್ಯಾಲಿಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಬೆಂಬಲ ಘೋಷಿಸಿದೆ. ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಈ ವಿಷಯವನ್ನು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಅವರು, ‘ಗ್ಯಾನು ಮಸ್ಟ್ ಗೋ’ (GYANU MUST GO) ಎಂದು ಬರೆದಿದ್ದಾರೆ. ‘ಕಾಕ್ರೋಚ್ ಜನತಾ ಪಾರ್ಟಿ INDIA ಒಕ್ಕೂಟದ ನವೆಂಬರ್ 1ರ ರ್ಯಾಲಿಗೆ ಬೆಂಬಲ ನೀಡುತ್ತದೆ. ರಾಷ್ಟ್ರವೇ ಸರ್ವೋಚ್ಚ’ (Nation above all) ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ‘ವೋಟ್ ಬಚಾವೋ, ದೇಶ್ ಬಚಾವೋ’ (ಮತ ಉಳಿಸಿ, ದೇಶ ಉಳಿಸಿ) ಅಭಿಯಾನದ ಭಾಗವಾಗಿ ಈ ರ್ಯಾ ಲಿಯನ್ನು ಆಯೋಜಿಸಿದೆ. INDIA ಒಕ್ಕೂಟದ ಪಾಲುದಾರ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಸೇರಿದಂತೆ ದೇಶದ ವಿವಿಧ ಭಾಗಗಳ ಮುಖಂಡರು ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.






