ನ್ಯಾಯಾಂಗದ ಕುರಿತ ಅಧ್ಯಾಯ ವಿವಾದ | ಬೇಷರತ್ ಕ್ಷಮೆಯಾಚಿಸಿದ NCERT

Photo | NDTV
ಹೊಸದಿಲ್ಲಿ : 8ನೇ ತರಗತಿ ಪಠ್ಯಪುಸ್ತಕದಲ್ಲಿ ʼನ್ಯಾಯಾಂಗದಲ್ಲಿನ ಭ್ರಷ್ಟಾಚಾರʼ ಕುರಿತ ಅಧ್ಯಾಯ ಪ್ರಕಟಿಸಿದ್ದ ಎನ್ಸಿಇಆರ್ಟಿ ಇದೀಗ ಬೇಷರತ್ ಕ್ಷಮೆಯಾಚಿಸಿದೆ ಮತ್ತು ಪುಸ್ತಕವನ್ನು ಸಂಪೂರ್ಣವಾಗಿ ಹಿಂಪಡೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಎನ್ಸಿಇಆರ್ಟಿ 8ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಕುರಿತು ಅಧ್ಯಾಯ ಪ್ರಕಟವಾಗಿತ್ತು. ಈ ಸುಪ್ರೀಂ ಕೋರ್ಟ್ ಈ ಬಗ್ಗೆ ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿ ಪಠ್ಯಪುಸ್ತಕವನ್ನು ನಿಷೇಧಿಸಿತ್ತು.
ಎನ್ಸಿಇಆರ್ಟಿ ಪ್ರಕಟಿಸಿದ “Exploring Society: India and Beyond” ಎಂಬ ಪಠ್ಯಪುಸ್ತಕದಲ್ಲಿ “The Role of Judiciary in our Society” ಎಂಬ ಶೀರ್ಷಿಕೆಯ ನಾಲ್ಕನೇ ಅಧ್ಯಾಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತು ವಿವಾದಾತ್ಮಕ ವಿಷಯಗಳು ಒಳಗೊಂಡಿದ್ದವು.
ಈ ಕುರಿತು ಪ್ರಕಟಣೆ ನೀಡಿದ ಎನ್ಸಿಇಆರ್ಟಿ “ಆ ಅಧ್ಯಾಯದ ಪ್ರಕಟಣೆ ಕುರಿತು ನಿರ್ದೇಶಕರು ಮತ್ತು ಸದಸ್ಯರು ಬೇಷರತ್ ಕ್ಷಮೆಯಾಚಿಸುತ್ತೇವೆ. ಸಂಪೂರ್ಣವಾಗಿ ಪುಸ್ತಕವನ್ನು ಹಿಂತೆಗೆದುಕೊಳ್ಳಲಾಗಿದ್ದು, ಈಗ ಅದು ಲಭ್ಯವಿಲ್ಲ” ಎಂದು ತಿಳಿಸಿದೆ.





