ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ʼಎನ್‌ಡಿಎʼ ಗೆಲ್ಲುತ್ತೋ? ʼಇಂಡಿಯಾʼ ಗೆಲ್ಲುತ್ತೋ?

ಹೊಸದಿಲ್ಲಿ : ಭಾರತೀಯ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟ ತಲುಪಿದ್ದು, INDIA ಒಕ್ಕೂಟವು ಸರಕಾರ ರಚನೆಗೆ ಕಸರತ್ತು ಮುಂದುವರೆಸಿದ್ದು ಕಿಂಗ್ ಮೇಕರ್ ಗಳಾದ ಜೆಡಿಯು ಮತ್ತು ಟಿಡಿಪಿಯ ಜೊತೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ನಿತೀಶ್ ಕುಮಾರ್ ಅವರಿಗೆ INDIA ಒಕ್ಕೂಟ ಸೇರಿದರೆ ಉಪಪ್ರಧಾನಿ ಪಟ್ಟ ನೀಡುವ ಆಫರ್ ನೀಡಲಾಗಿದೆ ಎನ್ನಲಾಗಿದೆ.
ಆಂಧ್ರಪ್ರದೇಶದಲ್ಲಿ ಪುಟಿದೆದ್ದಿರುವ ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯು ವಿಧಾನಸಭೆಯಲ್ಲೂ ಜಯಭೇರಿ ಭಾರಿಸಿದೆ. ತೆಲುಗು ದೇಶಂ ಪಾರ್ಟಿಯನ್ನು ಸಂಪರ್ಕಿಸಿರುವ INDIA ನಾಯಕರು, ಒಕ್ಕೂಟ ಸೇರಿ ಸರಕಾರ ರಚನೆಗೆ ನೆರವಾದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 7ಕ್ಕೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ.
ಈ ಚುನಾವಣೆಯಲ್ಲಿ NDA ಒಕ್ಕೂಟವು ಕನಿಷ್ಠ 292 ಸ್ಥಾನ ಗಳಲ್ಲಿ ಮುನ್ನಡೆ ಸಾಧಿಸಿದ್ದು, INDIA ಒಕ್ಕೂಟವು 234 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು 239 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. INDIA ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷವು ಕನಿಷ್ಠ 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎರಡನೇ ಅತೀ ದೊಡ್ಡ ಪಕ್ಷಗಾಗಿ ಹೊರಹೊಮ್ಮಿದೆ.
Live Updates
- 4 Jun 2024 10:57 AM IST
ಕಲಬುರಗಿ ಲೋಕಸಭಾ ಕ್ಷೇತ್ರ: ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಳಿಯ, ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬರುತ್ತಿದೆ.
ಸದ್ಯ ಡಾ.ಉಮೇಶ್ ಜಾಧವ್ 4840 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
- 4 Jun 2024 10:54 AM IST
ಕಾಸರಗೋಡು: ರಾಜ್ ಮೋಹನ್ ಉಣ್ಣಿತ್ತಾನ್ ರಿಗೆ 17,561 ಮತಗಳ ಮುನ್ನಡೆ
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ 73,216 ಮತಗಳನ್ನು ಗಳಿಸಿದ್ದಾರೆ. ಸಿಪಿಎಂ ಅಭ್ಯರ್ಥಿ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ 55,655 ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್. 35,497 ಮತಗಳನ್ನು ಗಳಿಸಿ ತೃತೀಯ ಸ್ಥಾನದಲ್ಲಿದ್ದಾರೆ.
- 4 Jun 2024 10:53 AM IST
ಆಂಧ್ರ ಪ್ರದೇಶ ವಿಧಾನಸಭೆ | ಟಿಡಿಪಿ - ಜನಸೇನಾ - ಬಿಜೆಪಿ ಮೈತ್ರಿಕೂಟಕ್ಕೆ 151 ಕ್ಷೇತ್ರಗಳಲ್ಲಿ ಮುನ್ನಡೆ. ಆಡಳಿತರೂಢ YSRPC ಗೆ ಭಾರೀ ಹಿನ್ನಡೆ.
- 4 Jun 2024 10:51 AM IST
ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರ ಮುನ್ನಡೆ 48459 ಮತಗಳಿಗೆ ಏರಿಕೆ
ಬ್ರಿಜೇಶ್ ಚೌಟ - 220294 ಮತಗಳು
ಆರ್. ಪದ್ಮರಾಜ್ - 171835 ಮತಗಳು
ಮತಗಳ ಅಂತರ - 48459







