ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ʼಎನ್‌ಡಿಎʼ ಗೆಲ್ಲುತ್ತೋ? ʼಇಂಡಿಯಾʼ ಗೆಲ್ಲುತ್ತೋ?

ಹೊಸದಿಲ್ಲಿ : ಭಾರತೀಯ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟ ತಲುಪಿದ್ದು, INDIA ಒಕ್ಕೂಟವು ಸರಕಾರ ರಚನೆಗೆ ಕಸರತ್ತು ಮುಂದುವರೆಸಿದ್ದು ಕಿಂಗ್ ಮೇಕರ್ ಗಳಾದ ಜೆಡಿಯು ಮತ್ತು ಟಿಡಿಪಿಯ ಜೊತೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ನಿತೀಶ್ ಕುಮಾರ್ ಅವರಿಗೆ INDIA ಒಕ್ಕೂಟ ಸೇರಿದರೆ ಉಪಪ್ರಧಾನಿ ಪಟ್ಟ ನೀಡುವ ಆಫರ್ ನೀಡಲಾಗಿದೆ ಎನ್ನಲಾಗಿದೆ.
ಆಂಧ್ರಪ್ರದೇಶದಲ್ಲಿ ಪುಟಿದೆದ್ದಿರುವ ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯು ವಿಧಾನಸಭೆಯಲ್ಲೂ ಜಯಭೇರಿ ಭಾರಿಸಿದೆ. ತೆಲುಗು ದೇಶಂ ಪಾರ್ಟಿಯನ್ನು ಸಂಪರ್ಕಿಸಿರುವ INDIA ನಾಯಕರು, ಒಕ್ಕೂಟ ಸೇರಿ ಸರಕಾರ ರಚನೆಗೆ ನೆರವಾದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 7ಕ್ಕೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ.
ಈ ಚುನಾವಣೆಯಲ್ಲಿ NDA ಒಕ್ಕೂಟವು ಕನಿಷ್ಠ 292 ಸ್ಥಾನ ಗಳಲ್ಲಿ ಮುನ್ನಡೆ ಸಾಧಿಸಿದ್ದು, INDIA ಒಕ್ಕೂಟವು 234 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು 239 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. INDIA ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷವು ಕನಿಷ್ಠ 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎರಡನೇ ಅತೀ ದೊಡ್ಡ ಪಕ್ಷಗಾಗಿ ಹೊರಹೊಮ್ಮಿದೆ.
Live Updates
- 4 Jun 2024 10:44 AM IST
ಹರಿಯಾಣದ ಸಿರ್ಸಾದಲ್ಲಿ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ 52,911 ಮತಗಳ ಅಂತರದಿಂದ ಬಿಜೆಪಿಯ ಅಶೋಕ್ ತನ್ವಾರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ
- 4 Jun 2024 10:41 AM IST
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಬಾರೀ ಮುನ್ನಡೆ ಕಾಯ್ದುಕೊಂಡ ಬಿಜೆಪಿ
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 204952 ಮತ
ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ 127690 ಮತ
ಬಿಜೆಪಿಗೆ 77262 ಮತಗಳ ಮುನ್ನಡೆ
- 4 Jun 2024 10:40 AM IST
ತುಮಕೂರು ಲೋಕಸಭಾ ಕ್ಷೇತ್ರ | 8ನೇ ಸುತ್ತಿನ ಎಣಿಕೆ ಮುಕ್ತಾಯ: ಬಿಜೆಪಿ ಮುನ್ನಡೆ 49386 ಮತಗಳಿಗೆ ಏರಿಕೆ
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 198433 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ. ಮುದ್ದಹನುಮೇ ಗೌಡ 155102 ಮತಗಳನ್ನು ಗಳಿಸಿದ್ದಾರೆ. ಸೋಮಣ್ಣ 49386 ಮತಗಳ ಮುನ್ನಡೆ ಸಾಧಿಸಿದ್ದಾರೆ.
- 4 Jun 2024 10:38 AM IST
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ರಿಗೆ 49061 ಮತಗಳ ಮುನ್ನಡೆ
7 ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ 234542 ಮತಗಳನ್ನು ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ 185481 ಮತಗಳನ್ನು ಗಳಿಸಿದ್ದಾರೆ.
- 4 Jun 2024 10:35 AM IST
ಬೆಂಗಳೂರು ಸೆಂಟ್ರಲ್: ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ರಿಗೆ ಅಲ್ಪ ಮುನ್ನಡೆ
ಮನ್ಸೂರ್ ಅಲಿ ಖಾನ್: 86742 ಮತ
ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್: 88202 ಮತ
ಮನ್ಸೂರ್ ಅಲಿ ಮುನ್ನಡೆ: 1466
- 4 Jun 2024 10:33 AM IST
NDA ಮೈತ್ರಿಕೂಟಕ್ಕೆ INDIA ಒಕ್ಕೂಟ ಪೈಪೋಟಿ ನೀಡುತ್ತಿದ್ದಂತೆ ಕುಸಿಯುತ್ತಿರುವ ಶೇರು ಮಾರುಕಟ್ಟೆ. 535 ಪಾಯಿಂಟ್ ಕುಸಿದ NIFTY, 1743 ಪಾಯಿಂಟ್ ಕುಸಿದ BANK NIFTY, 765 ಪಾಯಿಂಟ್ ಕುಸಿದ FIN NIFTY, 1787 ಪಾಯಿಂಟ್ ಕುಸಿದ SENSEX, 270 ಪಾಯಿಂಟ್ ಕುಸಿದ MIDCP NIFTY, 2167 ಪಾಯಿಂಟ್ ಕುಸಿದ BANKEX, 2500 ಪಾಯಿಂಟ್ ಕುಸಿದ NIFTYNXT50
- 4 Jun 2024 10:32 AM IST
ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರ ಮುನ್ನಡೆ 33207 ಮತಗಳಿಗೆ ಏರಿಕೆ
ಬ್ರಿಜೇಶ್ ಚೌಟ - 171604 ಮತಗಳು
ಆರ್. ಪದ್ಮರಾಜ್ - 138397 ಮತಗಳು
ಮತಗಳ ಅಂತರ - 33207







