ಜೂ.21ರಂದು NEET-UG ಮರುಪರೀಕ್ಷೆ: NTA ಮಹತ್ವದ ಘೋಷಣೆ

ಸಾಂದರ್ಭಿಕ ಚಿತ್ರ : PTI
ಹೊಸದಿಲ್ಲಿ: ಜೂ.21ರಂದು NEET (UG) 2026ರ ಮರುಪರೀಕ್ಷೆಯನ್ನು ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಘೋಷಿಸಿದೆ. ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ 2026ರ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಭಾರತ ಸರಕಾರದ ಅನುಮೋದನೆಯೊಂದಿಗೆ NTA ಹೊರಡಿಸಿದ ಅಧಿಸೂಚನೆಯ ಪ್ರಕಾರ, NEET-UG 2026 ಮರುಪರೀಕ್ಷೆಯನ್ನು 2026ರ ಜೂನ್ 21ರಂದು ನಡೆಸಲಾಗುವುದು ಎಂದು ತಿಳಿಸಿದೆ.
ಪತ್ರಿಕೆ ಸೋರಿಕೆ ವಿವಾದವು ಭಾರತದ ಅತಿದೊಡ್ಡ ಪ್ರವೇಶ ಪರೀಕ್ಷೆಗಳಲ್ಲಿ ಒಂದಾದ ನೀಟ್ ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿತ್ತು. ನೀಟ್ ರದ್ದತಿ ಹಿನ್ನೆಲೆ ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು.
Next Story




