ಭಾರತೀಯ ಕರೆನ್ಸಿ ಮೇಲಿನ ನಿಯಮ ಸಡಿಲಿಸಿದ ನೇಪಾಳ

Photo Credit : newindianexpress
ಕಠ್ಮಂಡು, ಜು.26: ನೇಪಾಳವು ಭಾರತೀಯ ಕರೆನ್ಸಿ ಮೇಲಿನ ಸುಮಾರು ಒಂದು ದಶಕದಷ್ಟು ಹಳೆಯ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಈಗ ಭಾರತೀಯ ಮತ್ತು ನೇಪಾಳಿ ಪ್ರಜೆಗಳು ಗರಿಷ್ಠ 25,000 ರೂ. ಪರಿಮಿತಿಗೆ ಒಳಪಟ್ಟು, 200 ರೂ. ಮತ್ತು ಹೊಸ ವಿನ್ಯಾಸದ 500 ರೂ. ಮುಖಬೆಲೆಯ ಭಾರತೀಯ ನೋಟುಗಳನ್ನು ದೇಶದೊಳಗೆ ತರಲು ಮತ್ತು ಹೊರಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ.
ನವೆಂಬರ್ 9, 2016 ಅಥವಾ ಅದಕ್ಕಿಂತ ನಂತರ ಬಿಡುಗಡೆಯಾದ 200 ರೂ. ಮತ್ತು 500 ರೂ. ಮುಖಬೆಲೆಯ ಭಾರತೀಯ ನೋಟುಗಳಿಗೆ ಪರಿಷ್ಕೃತ ನಿಯಮಗಳು ಅನ್ವಯಿಸುತ್ತವೆ ಎಂದು ನೇಪಾಳ ರಾಷ್ಟ್ರ ಬ್ಯಾಂಕ್ ನ ಪ್ರಕಟಣೆ ತಿಳಿಸಿದೆ. ನವೆಂಬರ್ 2016ರಲ್ಲಿ ಭಾರತವು 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ (ಡಿಮಾನಿಟೈಸೇಶನ್) ನಂತರ ಈ ನಿರ್ಬಂಧ ಜಾರಿಯಲ್ಲಿದ್ದು, ನೇಪಾಳವು 100 ರೂ.ವರೆಗಿನ ಮುಖಬೆಲೆಯ ಭಾರತೀಯ ನೋಟುಗಳಿಗೆ ಮಾತ್ರ ಅನುಮತಿ ನೀಡಿತ್ತು.
Next Story




