ನೂತನ ಎನ್ಸಿಇಆರ್ಟಿ ಪಠ್ಯಪುಸ್ತಕದಲ್ಲಿ ಹರಪ್ಪ ನಾಗರಿಕತೆ ಬದಲು ‘ಸಿಂಧೂ-ಸರಸ್ವತಿ ನಾಗರಿಕತೆ’ ಉಲ್ಲೇಖ

Photo : AI
ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ)ಯು ಬಿಡುಗಡೆಗೊಳಿಸಿರುವ ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ ‘ಎಕ್ಸ್ಪ್ಲೋರಿಂಗ್ ಸೊಸೈಟಿ:ಇಂಡಿಯಾ ಆ್ಯಂಡ್ ಬಿಯಾಂಡ್’ ನಲ್ಲಿ ಹರಪ್ಪ ನಾಗರಿಕತೆಯನ್ನು ‘ಸಿಂಧು-ಸರಸ್ವತಿ ನಾಗರಿಕತೆ’ ಎಂದು ಉಲ್ಲೇಖಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
ಪುರಾತತ್ವ ಶಾಸ್ತ್ರಜ್ಞರು ಈ ನಾಗರಿಕತೆಗೆ ಸಿಂಧು,ಹರಪ್ಪನ್, ಸಿಂಧು-ಸರಸ್ವತಿ ಅಥವಾ ಸಿಂಧು-ಸರಸ್ವತಿ ನಾಗರಿಕತೆ ಎಂಬ ಹಲವಾರು ಹೆಸರುಗಳನ್ನು ನೀಡಿದ್ದಾರೆ. ನಾವು ಈ ಎಲ್ಲ ಪದಗಳನ್ನು ಬಳಸುತ್ತೇವೆ. ಅದರ ನಿವಾಸಿಗಳನ್ನು ‘ಹರಪ್ಪನ್ನರು’ ಎಂದು ಕರೆಯಲಾಗುತ್ತದೆ ಎಂದು ಪಠ್ಯಪುಸ್ತಕದ ಆರನೇ ಅಧ್ಯಾಯ ‘ಭಾರತೀಯ ನಾಗರಿಕತೆಯ ಆರಂಭ’ದಲ್ಲಿ ಹೇಳಲಾಗಿದೆ.
ಅಧ್ಯಾಯದ ಉಪಶೀರ್ಷಿಕೆಯಡಿ ಸರಸ್ವತಿ ನದಿಯನ್ನೂ ಉಲ್ಲೇಖಿಸಲಾಗಿದೆ. ಈ ನದಿಯನ್ನು ಇಂದು ಭಾರತದಲ್ಲಿ ‘ಘಗ್ಗರ್’ ಮತ್ತು ಪಾಕಿಸ್ತಾನದಲ್ಲಿ ‘ಹಕ್ರಾ’ಎಂದು ಕರೆಯಲಾಗುತ್ತದೆ ಎಂದು ಬಣ್ಣಿಸಲಾಗಿದೆ. ಋಗ್ವೇದದಲ್ಲಿ ಸರಸ್ವತಿ ನದಿಯ ಪ್ರಸ್ತಾಪದ ಕುರಿತು ಪುಸ್ತಕದಲ್ಲಿ ಬರೆಯಲಾಗಿದೆ.
ಎನ್ಸಿಇಆರ್ಟಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಅನುಗುಣವಾಗಿ ಶಾಲಾ ಪಠ್ಯಪುಸ್ತಕಗಳ ಪಠ್ಯಕ್ರಮವನ್ನು ಪರಿಷ್ಕರಿಸಿದೆ.





