ಕ್ಯಾನ್ಸರ್ ಜತೆ ಹೋರಾಡುತ್ತಿರುವ ಜನಪ್ರಿಯ ಬಾಲಿವುಡ್ ನಟ ಜೂನಿಯರ್ ಮಹಮೂದ್
Photo: twitter.com/Raajeev_Chopra
ಮುಂಬೈ: ಜೂನಿಯರ್ ಮಹಮೂದ್ ಎಂದು ಜನಪ್ರಿಯರಾಗಿರುವ ನಟ ನಯೀಮ್ ಸಯ್ಯದ್ (67) ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
"ಎರಡು ತಿಂಗಳಿಂದ ಅವರು ಅಸ್ವಸ್ಥರಾಗಿದ್ದು, ಮೊದಲಿಗೆ ನಾವು ಸಣ್ಣ ಸಮಸ್ಯೆ ಇರಬಹುದು ಎಂದುಕೊಂಡಿದ್ದೆವು. ಆದರೆ ದಿಢೀರನೇ ಅವರ ತೂಕ ಇಳಿಕೆಯಾಗಲು ಆರಂಭವಾಯಿತು" ಎಂದು ಅವರ ನಿಕಟವರ್ತಿ ಮತ್ತು ನಟ ಸಲಾಮ್ ಖಾಝಿ ಹೇಳಿದ್ದಾರೆ.
ವೈದ್ಯಕೀಯ ವರದಿ ಬಂದಾಗ ಅವರು ಲಿವರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವುದು ದೃಢಪಟ್ಟಿದೆ. ಅವರ ಕರುಳಿನಲ್ಲಿ ಗಡ್ಡೆ ಕಂಡುಬಂದಿದ್ದು, ಕಾಮಾಲೆ ಕೂಡಾ ಬಾಧಿಸುತ್ತಿದೆ. ಚಿಕಿತ್ಸೆ ಮುಂದುವರಿದಿದ್ದು, ಇದು ನಾಲ್ಕನೇ ಹಂತದ ಕ್ಯಾನ್ಸರ್ ಎಂದು ವೈದ್ಯರು ಹೇಳಿದ್ದಾರೆ"
ಹಿರಿಯ ನಟ ಜಾನಿ ಲಿವರ್ ಕೂಡಾ ಜ್ಯೂನಿಯರ್ ಮೊಹ್ಮದ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ವಿವಿಧ ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜ್ಯೂನಿಯರ್ ಮೊಹ್ಮದ್, ಬ್ರಹ್ಮಚಾರಿ (1968), ಮೇರಾ ನಾಮ್ ಜೋಕರ್ (1970), ಪರ್ವಾರೀಶ್ (1977) ಮತ್ತು ದೋ ಔರ್ ದೋ ಪಾಂಚ್ (1980)ಯಂಥ ಚಿತ್ರಗಳ ಮೂಲಕ ಜನಪ್ರಿಯರಾಗಿದ್ದರು.