NightClub ದುರಂತ: ಮಾಲೀಕರ ಇನ್ನೊಂದು ಹೊಟೇಲ್ ಧ್ವಂಸಕ್ಕೆ ಗೋವಾ ಮುಖ್ಯಮಂತ್ರಿ ಆದೇಶ

Photo : NDTV
ಪಣಜಿ, ಡಿ. 9: ಅರ್ಪೊರ Night Club ಬೆಂಕಿ ದುರಂತದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿರುವಂತೆಯೇ, ಅದರ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಒಡೆತನದ, ವಾಗತೂರ್ನಲ್ಲಿ ಸಮುದ್ರ ದಂಡೆಯಲ್ಲಿರುವ ಹೊಟೇಲ್ ರೋಮಿಯೋ ಲೇನ್ ಅನ್ನು ಧ್ವಂಸಗೊಳಿಸುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಂಗಳವಾರ ಆದೇಶಿಸಿದ್ದಾರೆ.
ಅರ್ಪೋರ ನೈಟ್ ಕ್ಲಬ್ ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಮಂದಿ ಮೃತಪಟ್ಟಿದ್ದಾರೆ.
ನೈಟ್ಕ್ಲಬ್ ನ ಮಾಲೀಕರಾದ ಈ ಸಹೋದರರು ‘ಬಿರ್ಚ್ ಬೈ ರೋಮಿಯೊ ಲೇನ್’ನಲ್ಲಿ ಬೆಂಕಿ ಸಂಭವಿಸಿದ ತಕ್ಷಣ ಥಾಯ್ಲೆಂಡ್ ಗೆ ಪರಾರಿಯಾಗಿದ್ದಾರೆ.
ಗೋವಾ ಪೊಲೀಸರು ರವಿವಾರ ಬೆಳಗ್ಗೆ ಲೂತ್ರಾ ಸಹೋದರರು ಮತ್ತು ಕೆಲವು ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಕೊಲೆಯಲ್ಲದ ನರಹತ್ಯೆ, ಜನರ ಪ್ರಾಣಗಳು ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ಗುರಿಪಡಿಸಿದ ಹಾಗೂ ಬೆಂಕಿ ಅಥವಾ ದಹನಶೀಲ ವಸ್ತುಗಳನ್ನು ನಿರ್ಲಕ್ಷ್ಯದಿಂದ ನಿಭಾಯಿಸಿದ ಆರೋಪಗಳನ್ನು ಹೊರಿಸಲಾಗಿತ್ತು.





