ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್
ನಿತೀಶ್ ರಿಂದ ನಾಲ್ಕನೇ ಬಾರಿ ಎನ್ ಡಿ ಎ ಗೆ ʼಘರ್ ವಾಪಸಿʼ

Photo : PTI
ಪಾಟ್ನಾ : ಬಿಹಾರದ ಜೆಡಿಯು -ಬಿಜೆಪಿ ನೇತೃತ್ವದ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಪ್ರಮಾಣವಚನ ಬೋಧಿಸಿದರು. 9 ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗುವ ಮೂಲಕ ನಿತೀಶ್ ಕುಮಾರ್ ಕೆಲ ದಿನಗಳಿಂದ ನಡೆದಿದ್ದ ರಾಜಕೀಯ ಬೆಳವಣಿಗೆಗಳಿಗೆ ಅಂತ್ಯ ಹಾಡಿದ್ದಾರೆ.
ಎನ್ ಡಿ ಎ ಮೈತ್ರಿಕೂಟ ತೊರೆದು, ಕಾಂಗ್ರೆಸ್ ಆರ್ಜೆಡಿ ನೇತೃತ್ವದ ಮೈತ್ರಿಕೂಟದ ಕೈಹಿಡಿದಿದ್ದ ನಿತೀಶ್ ಮತ್ತೆ ಎನ್ ಡಿ ಎ ಗೆ ಘರ್ ವಾಪಸಿಯಾಗಿದ್ದಾರೆ. ತಮ್ಮ ರಾಜಕೀಯ ನಿಲುವುಗಳ ಮೂಲಕ ಅವರು ಮತ್ತೆ ಮತ್ತೆ ಸುದ್ದಿಯಲ್ಲಿದ್ದಾರೆ.
Next Story







