ಬೆದರಿಕೆಗಳಿಗೆ ಬಗ್ಗಲ್ಲ: ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಹೇಳಿಕೆ
ಮುಹಮ್ಮದ್ ಮುಯಿಝ್ಝ | Photo: PTI
ಮಾಲೆ : “ಮಾಲ್ದೀವ್ಸ್ ಸಣ್ಣ ದೇಶವಿರಬಹುದು. ಆದರೆ ಯಾವುದೇ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ” , ಎಂದು ಮಾಲ್ದೀವ್ಸ್ನ ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಹೇಳಿದ್ದಾರೆ.
ಐದು ದಿನಗಳ ಚೀನಾ ಪ್ರವಾಸ ಮುಗಿಸಿ ವಾಪಾಸ್ಸಾಗಿರುವ ಅವರಿಂದ ಹೇಳಿಕೆ ಬಂದಿದೆ. ಪ್ರಧಾನಿ ಮೋದಿ ವಿರುದ್ಧ ಅಲ್ಲಿನ ಮೂವರು ಸಚಿವರು ಹೇಳಿಕೆ ನೀಡಿದ ನಂತರ ಭಾರತ ಹಾಗೂ ಮಾಲ್ದೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಹೇಳಿಕೆ ನೀಡಿದ್ದ ಮೂರು ಸಚಿವರನ್ನು ಮಾಲ್ದೀವ್ಸ್ ಈಗಾಗಲೇ ವಜಾಗೊಳಿಸಿದೆ.
ಇತ್ತೀಚಿಗೆಗೆ ಚೀನಾಗೆ 5 ದಿನಗಳ ಭೇಟಿ ನೀಡಿದ್ದ ಅಧ್ಯಕ್ಷ ಮುಯಿಝ್ಝ 20 ಒಪ್ಪಂದಗಳಿಗೆ ಚೀನಾದೊಂದಿಗೆ ಸಹಿ ಹಾಕಿದ್ದಾರೆ. ಚೀನಾದಿಂದ ಹೆಚ್ಚಿನ ಪ್ರವಾಸಿಗರನ್ನು ಕಳಿಸುವಂತೆ ಅಲ್ಲಿನ ಸರಕಾರದ ಜೊತೆ ಮುಯಿಝ್ಝ ವಿನಂತಿಸಿಕೊಂಡಿದ್ದರು.
Next Story