ಕುಂಞಾಮದ್ ಅಲ್ಲ... ಕುಂಞಿಖಾದರ್... ; ಮಲಬಾರ್ ದಂಗೆಯ ನಾಯಕನ ಫೋಟೋ ವಿವಾದಕ್ಕೆ ಹೊಸ ತಿರುವು

ವರಿಯಾಕುನ್ನತ್ ಕುಂಞಾಮದ್ ಹಾಜಿ | Photo: Wikipedia
ಕೋಝಿಕ್ಕೋಡ್ : 1921ರ ಮಲಬಾರ್ ದಂಗೆಯ ನಾಯಕರಲ್ಲೊಬ್ಬರಾದ ವರಿಯಾಕುನ್ನನ್ ಕುಂಞಾಮದ್ ಹಾಜಿ ಅವರದ್ದೆಂದು ವ್ಯಾಪಕವಾಗಿ ಪ್ರಸಾರವಾಗಿದ್ದ ಛಾಯಾಚಿತ್ರವೊಂದು, ವಾಸ್ತವವಾಗಿ ಆ ಯುದ್ಧದಲ್ಲಿ ಸಕ್ರಿಯ ಪಾತ್ರವಹಿಸಿದ್ದಂತಹ ಇನ್ನೋರ್ವ ಹೋರಾಟಗಾರನದ್ದೆಂದು ಇತಿಹಾಸ ಸಂಶೋಧಕರೊಬ್ಬರು ಬಹಿರಂಗಪಡಿಸಿದ್ದಾರೆ.
ತನ್ನ ಹಲವಾರು ದಾಖಲೆಗಳನ್ನು ಅಧ್ಯಯನ ಮಾಡಿ ಆ ಛಾಯಾಚಿತ್ರವು ಕುಂಞಿ ಖಾದರ್ ಅವರದ್ದೆಂಬುದನ್ನು ಸಾಬೀತುಪಡಿಸಿರುವುದಾಗಿ ಬ್ರಿಟನಿನಲ್ಲಿ ನೆಲೆಸಿರುವ ಭಾರತೀಯ ಮೂಲದ ಇತಿಹಾಸತಜ್ಞ ಅಬ್ಬಾಸ್ ಪಣಕ್ಕಲ್ ಅವರು ತನ್ನ ನೂತನ ಪುಸ್ತಕ ‘ಮುಸಲಿಯಾರ್ ಕಿಂಗ್’ನಲ್ಲಿ ಪ್ರತಿಪಾದಿಸಿದ್ದಾರೆ.
1922ರಲ್ಲಿ ಫ್ರೆಂಚ್ ನಿಯತಕಾಲಿಕವೊಂದು ಮಲಬಾರ್ ದಂಗೆಯ ನಾಯಕ ಅಲಿ ಮುಸಲಿಯಾರ್ ಹಾಗೂ ಅವರ ಅಕ್ಕಪಕ್ಕದಲ್ಲಿ ಇತರ ಇಬ್ಬರು ವ್ಯಕ್ತಿಗಳಿರುವ ಛಾಯಾಚಿತ್ರವೊಂದನ್ನು ಪ್ರಕಟಿಸಿತ್ತು. ‘‘ದಂಗೆಯ ಪ್ರಮುಖ ರೂವಾರಿಗಳಲ್ಲೊಬ್ಬರಾದ ಮೊಹಮ್ಮದ್ ಆಲಿಯ ಛಾಯಾಚಿತ್ರವಿದಾಗಿದೆ. ಅವರ ಎರಡೂ ಬದಿಗಳಲ್ಲಿರುವವರು ಇಂಗ್ಲಿಷ್ ವಸಾಹತುಕಾರರನ್ನು ಹತ್ಯೆಗೈಯಲು ಸಂದೇಶಗಳನ್ನು ನೀಡಿದ್ದ ಇಬ್ಬರು ಮಾಪಿಳ್ಳೆಗಳದ್ದಾಗಿದೆ’’ ಎಂದು ಛಾಯಾಚಿತ್ರದ ಜೊತೆಗೆ ಪ್ರಕಟವಾದ ಬರಹದಲ್ಲಿ ಉಲ್ಲೇಖಿಸಲಾಗಿತ್ತು.
2021ರಲ್ಲಿ ರಮೀಸ್ ಮುಹಮ್ಮದ್ ಎಂಬವರು ತಾನು ಬರೆದ ಪುಸ್ತಕದಲ್ಲಿ, ‘ಫ್ರೆಂಚ್ ಪತ್ರಿಕೆಯು ಪ್ರಕಟಿಸಿದ್ದ ಛಾಯಾಚಿತ್ರದ ಎಡ ಭಾಗದಲ್ಲಿರುವವರು ವರಿಯಾಕುನ್ನತ್ ಕುಂಞಾಮದ್ ಹಾಜಿ’ ಎಂದು ಉಲ್ಲೇಖಿಸಿತ್ತು. ಈ ಪುಸ್ತಕವು ಪ್ರಕಟವಾದ ಆನಂತರ ಆ ಛಾಯಾಚಿತ್ರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಆ ಫೋಟೋದಲ್ಲಿರುವವರನ್ನು ತಪ್ಪಾಗಿ ಗುರುತಿಸಲಾಗಿದೆ ’ ಎಂದು ಹೇಳಿದ್ದರು.
‘ಈ ಫೋಟೋದಲ್ಲಿರುವ ಇಬ್ಬರು, ಬ್ರಿಟಿಶ್ ಅಧಿಕಾರಿಗಳಾದ ರೌಲೆ ಹಾಗೂ ಜಾನ್ಸನ್ ಅವರನ್ನು ಹತ್ಯೆಗೈಯುವ ಮೂಲಕ ಮಲಬಾರ್ ದಂಗೆಯನ್ನು ಆರಂಭಿಸಿದರು. ತನೂರ್ನ ಉಮ್ಮಾಯಾಂಡಕಾತ್ ಕುಂಞಿ ಖಾದರ್ ಹಾಗೂ ಚಾನಿಮಟೆಲ್ನ ಲವಾ ಕುಟ್ಟಿ ಛಾಯಾಚಿತ್ರದಲ್ಲಿರುವ ಇನ್ನಿಬ್ಬರು ಹೋರಾಟಗಾರರೆಂದು ದಾಖಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ’ಎಂದು ರಮೀಸ್ ತಿಳಿಸಿದ್ದರು.
ಆದರೆ ಪನಕ್ಕಲ್ ಅವರು ರಮೀಸ್ ಅವರ ವಾದವನ್ನು ತಿರಸ್ಕರಿಸಿದ್ದಾರೆ. ಛಾಯಾಚಿತ್ರದ ಎಡಭಾಗದಲ್ಲಿರುವವರು ಕುಂಞಿ ಖಾದರ್ ಅವರೇ ಹೊರತು ಹಾಜಿಯವರಲ್ಲವೆಂದು ಅವರು ಅಭಿಪ್ರಾಯಿಸಿದ್ದಾರೆ. ‘‘ನಾನು ರಮೀಸ್ ಅವರು ಬರೆದಿರುವ ಪುಸ್ತಕವನ್ನು ಓದಿಲ್ಲ. ಹೀಗಾಗಿ ಅದರ ಬಗ್ಗೆ ವಿಮರ್ಶೆ ಮಾಡಲು ನನಗೆ ಇತಿಮಿತಿಗಳಿವೆ. ಆದರೆ ಫ್ರೆಂಚ್ ಪತ್ರಿಕೆಯು, ಮಲಬಾರ್ ದಂಗೆಯನ್ನು ಆರಂಭಿಸಿದವರ ಛಾಯಾಚಿತ್ರಗಳಿವು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆಯೆಂದು ಹೇಳಿದರು.
ಯುದ್ಧ ಆರಂಭವಾಗುವುದಕ್ಕೆ ಮೊದಲೇ ಕುಂಞಿ ಖಾದರ್ ಬ್ರಿಟಿಶರ ಕೈಗೆ ಸಿಕ್ಕಿಬಿದ್ದಿದ್ದರು. ‘‘ಹೀಗಾಗಿ ಛಾಯಾಚಿತ್ರವು ಖಾದರ್ ಅವರದ್ದಾಗಿರಲು ಸಾಧ್ಯವಾಗಿಲ್ಲ.ಲವಾ ಕುಟ್ಟಿ ಅವರು ಸೆರೆಸಿಗಲೇ ಇಲ್ಲ ಹಾಗೂ ಅವರು ಯುದ್ಧದಲ್ಲಿ ಸಾವನ್ನಪ್ಪಿದ್ದರು. ಹೀಗಾಗಿ ಅವರು ಫೋಟೋ ತೆಗೆಸಿಕೊಳ್ಳುವ ಸಾಧ್ಯತೆಗಳಿಲ್ಲವೆಂದು ರಮೀಸ್ ವಾದಿಸುತ್ತಾರೆ.
ಪನಕ್ಕಲ್ ಅವರು ಬ್ರಿಟನಿನ ಸೈಂಟ್ ಆ್ಯಂಡ್ರೂಸ್ ವಿವಿಯ ಇತಿಹಾಸ ವಿದ್ಯಾಲಯದಲ್ಲಿ ಇತಿಹಾಸತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬ್ರಿಟನ್ ಸರ್ರೆಯಲ್ಲಿರುವ ಧಾರ್ಮಿಕ ಜೀವನ ಹಾಗೂ ವಿಶ್ವಾಸ ಕೇಂದ್ರದ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ.







