Odisha | ಗ್ರಹಾಂ ಸ್ಟೇನ್ಸ್ ಹತ್ಯಾ ಆರೋಪಿ ಬಜರಂಗದಳ ಕಾರ್ಯಕರ್ತ ದಾರಾಸಿಂಗ್ ನನ್ನು ಸನ್ನಡತೆಯ ಆಧಾರದಲ್ಲಿ ಶೀಘ್ರ ಬಿಡುಗಡೆ ಸಾಧ್ಯತೆ

ದಾರಾಸಿಂಗ್ | Photo Credit: X
ಭುವನೇಶ್ವರ, ಜು.14: ಆಸ್ಟ್ರೇಲಿಯದ ಕ್ರೈಸ್ತ ಮಿಷನರಿ ಗ್ರಹಾಂ ಸ್ಟೇನ್ಸ್ ಹಾಗೂ ಅವರ ಇಬ್ಬರು ಅಪ್ರಾಪ್ತ ವಯಸ್ಸಿನ ಪುತ್ರರನ್ನು 1999ರಲ್ಲಿ ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಬಜರಂಗದಳ ಕಾರ್ಯಕರ್ತ ದಾರಾಸಿಂಗ್ ಶೀಘ್ರದಲ್ಲೇ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಸನ್ನಡತೆಯ ನೆಲೆಯಲ್ಲಿ ಆತನನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಒಡಿಶಾ ರಾಜ್ಯ ದಂಡನೆ ಮರುಪರಿಶೀಲನಾ ಮಂಡಳಿಯು ಶಿಫಾರಸು ಮಾಡಿದೆ.
ಪ್ರಸಕ್ತ ದಾರಾಸಿಂಗ್ನನ್ನು ಕಿಯೊಂಜಾರ್ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದ್ದು, ಆತ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ವಿವಿಧ ಜೈಲುಗಳಲ್ಲಿ ಒಟ್ಟು 26 ವರ್ಷಗಳನ್ನು ಕಳೆದಿದ್ದಾನೆ.
1999ರ ಜನವರಿ 22ರ ರಾತ್ರಿ ಸ್ಟೇನ್ಸ್ ಹಾಗೂ ಅವರ ಇಬ್ಬರು ಪುತ್ರರು ಮಲಗಿದ್ದ ವ್ಯಾನ್ ಗೆ ದಾರಾಸಿಂಗ್ ಹಾಗೂ ಆತನ ಸಹಚರರು ಬೆಂಕಿ ಹಚ್ಚಿದ್ದರು.
Next Story




