ಮಿಝೋರಾಂ: ಆಡಳಿತರೂಢ ಎಂಎನ್ಎಫ್ ಅನ್ನು ಮಣಿಸಿದ ZPM

ಜೋರಾಂ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಲಾಲ್ದುಹೋಮ (PTI)
ಐಜ್ವಾಲ್: ಮಿಝೋರಾಂ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷವನ್ನು ಜೋರಾಂ ಪೀಪಲ್ಸ್ ಪಾರ್ಟಿ (ZPM) ಸೋಲಿಸಿದೆ. 40 ವಿಧಾನಸಭಾ ಸದಸ್ಯ ಬಲದ ಮಿಝೋರಾಂನಲ್ಲಿ ZPM 27 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿದೆ.
ಎಂಎನ್ಎಫ್ ಪಕ್ಷ ಕೇವಲ 9 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 2 ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆದ್ದಿದೆ.
ಐಝ್ವಾಲ್ ಪೂರ್ವದಲ್ಲಿ ಸ್ಪರ್ಧಿಸಿದ್ದ ಸಿಎಂ ಝೊರಾಂಥಾಂಗ 2100 ಮತಗಳ ಅಂತರದಿಂದ ಸೋತಿರುವುದು ಕೂಡಾ ಎಂಎನ್ಎಫ್ಗೆ ತೀವ್ರ ಆಘಾತವಾಗಿದೆ.
Next Story





