ಪರೀಕ್ಷಾ ಅಕ್ರಮ ತಡೆಗೆ ಕ್ರಮ: ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆ ಮೊದಲ ದಿನ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು

ಸಾಂದರ್ಭಿಕ ಚಿತ್ರ
ಲಕ್ನೋ: ಇಂದು ಆರಂಭಗೊಂಡ ಉತ್ತರ ಪ್ರದೇಶ ಬೋರ್ಡ್ ಹೈಸ್ಕೂಲ್ ಮತ್ತು ಇಂಟರ್ಮೀಡಿಯೆಟ್ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯಲು ಆಡಳಿತ ಕೈಗೊಂಡ ಅಭೂತಪೂರ್ವ ಕ್ರಮಗಳ ಪರಿಣಾಮವಾಗಿ ಮೊದಲ ದಿನದಂದು 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ವರದಿಯಾಗಿದೆ.
ಪರೀಕ್ಷಾ ಕೊಠಡಿ ಪರಿವೀಕ್ಷಕರಿಗೆ ಬಾರ್ ಕೋಡ್ ಇರುವ ಐಡಿ ಕಾರ್ಡ್, ಸಿಸಿಟಿವಿ ಮತ್ತು ಪೊಲೀಸ್ ಸರ್ವೇಕ್ಷಣೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಹಂತಗಳಲ್ಲಿ ಆನ್ಲೈನ್ ನಿಗಾ ಮುಂತಾದ ಕ್ರಮಕೈಗೊಳ್ಳಲಾಗಿದೆ.
ಇಂದು ಪರೀಕ್ಷೆಯ ಮೊದಲ ದಿನದಂದು ಒಟ್ಟು 3,33,541 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಐದು ಪರೀಕ್ಷಾ ಅಕ್ರಮ ಪ್ರಕರಣಗಳು ವರದಿಯಾಗಿದ್ದು ಇವುಗಳಲ್ಲಿ ನಕಲಿ ಅಭ್ಯರ್ಥಿಗಳು ಮತ್ತು ಪರೀಕ್ಷಾ ಕೇಂದ್ರ ಆಡಳಿತಗಾರರನ್ನು ಪತ್ತೆಹಚ್ಚಿದ ಪ್ರಕರಣಗಳೂ ಇದ್ದು, ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡಿದ್ದಾರೆ.
ರಾಜ್ಯದ ವಿವಿಧೆಡೆ ಪರೀಕ್ಷಾ ಕೇಂದ್ರಗಳ ಮೇಳಿನ ನಿಗಾಗೆ ಜಿಲ್ಲಾ ಕಂಟ್ರೋಲ್ ರೂಂಗಳನ್ನೂ ಸ್ಥಾಪಿಸಲಾಗಿತ್ತು.





