ಏಕಕಾಲಕ್ಕೆ 50 ಕ್ಕೂ ಅಧಿಕ ವಾಹನಗಳು ಪಂಚರ್: ರಾತ್ರಿಯಿಡೀ ಹೆದ್ದಾರಿಯಲ್ಲಿ ಪರದಾಡಿದ ಪ್ರಯಾಣಿಕರು
ಮುಂಬೈ-ನಾಗ್ಪುರ ಹೆದ್ದಾರಿಯಲ್ಲಿ ನಡೆದ ಘಟನೆ

Photo: NDTV
ಹೊಸದಿಲ್ಲಿ: ಹೆದ್ದಾರಿಯ ಮೇಲೆ ಬಿದ್ದ ಕಬ್ಬಿಣದ ಬೋರ್ಡ್ ನಿಂದಾಗಿ ಸುಮಾರು 50 ಕ್ಕೂ ಅಧಿಕ ವಾಹನಗಳು ಒಂದೇ ಬಾರಿಗೆ ಪಂಚರ್ ಆಗಿರುವ ಘಟನೆ ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ ನಡೆದಿದೆ.
ವಾಶಿಮ್ ಜಿಲ್ಲೆಯ ಮಾಲೆಗಾಂವ್ ಮತ್ತು ವನೋಜಾ ಟೋಲ್ ಪ್ಲಾಜಾ ನಡುವೆ ಡಿಸೆಂಬರ್ 29 ರಂದು ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ನಾಲ್ಕು ಚಕ್ರದ ವಾಹನಗಳು ಮತ್ತು ಸರಕು ಸಾಗಣೆ ಟ್ರಕ್ಗಳು ನಡುರಸ್ತೆಯಲ್ಲೇ ಬಾಕಿಯಾಗಿದೆ.
ಇದರಿಂದಾಗಿ ಹೆದ್ದಾರಿಯಲ್ಲಿ ದೀರ್ಘ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಮಾತ್ರವಲ್ಲ ರಾತ್ರಿಯಿಡೀ ಯಾವುದೇ ಸಹಾಯ ಸಿಗದೆ ಪರಯಾಣಿಕರು ಪರದಾಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಬೋರ್ಡ್ ಆಕಸ್ಮಿಕವಾಗಿ ಬಿದ್ದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಎಸೆಯಲ್ಪಟ್ಟಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
Next Story





