ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ತೆರೆ | ಪ್ರತಿಪಕ್ಷಗಳ ಪ್ರತಿಭಟನೆಗಳ ನಡುವೆಯೇ ಮಸೂದೆಗಳು ಅಂಗೀಕಾರ

PC : ANI
ಹೊಸದಿಲ್ಲಿ,ಆ.21: ಒಂದು ತಿಂಗಳ ಕಾಲ ನಡೆದ ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಅಂತ್ಯಗೊಂಡಿದ್ದು, ಪ್ರತಿಪಕ್ಷಗಳ ಪ್ರತಿಭಟನೆಗಳು,ಮುಂದೂಡಿಕೆಗಳು ಮತ್ತು ಸಭಾತ್ಯಾಗಗಳ ನಡುವೆ ಲೋಕಸಭೆ 12 ಮತ್ತು ರಾಜ್ಯಸಭೆ 14 ಮಸೂದೆಗಳನ್ನು ಅಂಗೀಕರಿಸಿವೆ.
ಜುಲೈ 21ರಂದು ಮುಂಗಾರು ಅಧಿವೇಶನ ಆರಂಭಗೊಂಡಾಗಿನಿಂದ ಉಭಯ ಸದನಗಳಲ್ಲಿ ಆಪರೇಷನ್ ಸಿಂಧೂರ ಕುರಿತು ಚರ್ಚೆಗಳನ್ನು ಹೊರತುಪಡಿಸಿ ಗಮನಾರ್ಹ ಕಲಾಪಗಳು ನಡೆಯಲಿಲ್ಲ.
ಆರಂಭದಲ್ಲಿ ಆಪರೇಷನ್ ಸಿಂಧೂರ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಪ್ರತಿಪಕ್ಷಗಳು ಬಳಿಕ ಬಿಹಾರದಲ್ಲಿ ಎಸ್ಐಆರ್ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದವು. ಹೀಗಾಗಿ ಸಂಸತ್ತು ಪದೇ ಪದೇ ವ್ಯತ್ಯಯಗಳು ಮತ್ತು ಮುಂದೂಡಿಕೆಗಳಿಗೆ ಸಾಕ್ಷಿಯಾಗಿತ್ತು. ಹಲವಾರು ಪ್ರಮುಖ ಮಸೂದೆಗಳು ಸದನಗಳಲ್ಲಿ ಪ್ರತಿಪಕ್ಷ ಸದಸ್ಯರ ಅನುಪಸ್ಥಿತಿಯಲ್ಲಿ ಅಂಗೀಕಾರಗೊಂಡಿವೆ.
ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳು
► ಗೋವಾ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ,2025
► ಮರ್ಚಂಟ್ ಶಿಪ್ಪಿಂಗ್ ಮಸೂದೆ,2025
► ಮಣಿಪುರ ಸರಕುಗಳು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ಮಸೂದೆ,2025
► ಮಣಿಪುರ ಧನ ವಿನಿಯೋಗ (ಸಂಖ್ಯೆ 2)ಮಸೂದೆ,2025
► ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ,2025
► ರಾಷ್ಟ್ರೀಯ ಡೋಪಿಂಗ್ ವಿರೋಧಿ(ತಿದ್ದುಪಡಿ) ಮಸೂದೆ,2025
► ಆದಾಯ ತೆರಿಗೆ ಮಸೂದೆ,2025
► ತೆರಿಗೆ ಕಾನೂನುಗಳ(ತಿದ್ದುಪಡಿ) ಮಸೂದೆ,2025
► ಭಾರತೀಯ ಬಂದರುಗಳ ಮಸೂದೆ,2025
► ಗಣಿಗಳು ಮತ್ತು ಖನಿಜಗಳ(ಅಭಿವೃದ್ಧಿ ಮತ್ತು ನಿಯಂತ್ರಣ) ಮಸೂದೆ,2025
► ಇಂಡಿಯನ್ ಇನ್ಸ್ಟಿಟ್ಯೂಟ್ಸ್ ಆಫ್ ಮ್ಯಾನೇಜ್ಮೆಂಟ್(ತಿದ್ದುಪಡಿ) ಮಸೂದೆ,2025
► ಆನ್ಲೈನ್ ಗೇಮಿಂಗ್(ಪ್ರಚಾರ ಮತ್ತು ನಿಯಂತ್ರಣ) ಮಸೂದೆ,2025
ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳು
► ಬಿಲ್ಸ್ ಆಫ್ ಲೇಡಿಂಗ್ ಮಸೂದೆ,2025
► ಸಮುದ್ರ ಮೂಲಕ ಸರಕು ಸಾಗಣೆ ಮಸೂದೆ,2025
► ಕರಾವಳಿ ಸಾಗಣೆ ಮಸೂದೆ,2025